ಭಾರತ ಸೆಮಿಫೈನಲ್ ಸ್ಥಾನ ಖಚಿತ ?? ಪಂದ್ಯಕ್ಕೆ ಮಳೆ ಭೀತಿ ಇಲ್ಲ….
ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಸ್ಥಾನವನ್ನ ಭದ್ರಪಡಿಸಿಕೊಳ್ಳಲು ಭಾರತ ಭಾನುವಾರ ಜಿಂಬಾಬ್ವೆ ತಂಡವನ್ನ ಎದುರಿಸಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಭಾರತ ತಂಡ ಪ್ರಸ್ತುತ ನಾಲ್ಕು ಪಂದ್ಯಗಳಿಂದ 6 ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಅಗ್ರಸ್ಥಾನದಲ್ಲಿದ್ದರೆ, ಜಿಂಬಾಬ್ವೆ ನಾಲ್ಕು ಪಂದ್ಯಗಳಿಂದ 3 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಭಾರತ ಮತ್ತು ಜಿಂಬಾಬ್ವೆ ನಡುವಿನ ಈ ಪಂದ್ಯದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನವೇ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಆದರೆ, ಮಳೆರಾಯ ಮೋಜು ಕೆಡಿಸಬಹುದೆಂಬ ಆತಂಕವೂ ಎದುರಾಗಿದೆ. ಮೆಲ್ಬೋರ್ನ್‌ನಲ್ಲಿ ಮಳೆಯಿಂದಾಗಿ ಟಿ20 ವಿಶ್ವಕಪ್‌ನ ನಾಲ್ಕು ಪಂದ್ಯಗಳ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ಇಂದು ನಡೆಯಲಿರುವ ಭಾರತ ಮತ್ತು ಜಿಂಬಾಬ್ವೆ ಪಂದ್ಯಕ್ಕೂ ಮಳೆ ಕಾಡಬಹುದಾ ಎಂಬ ಆತಂಕವಿದೆ.
ಮಳೆ ಸಾಧ್ಯತೆ ಕಡಿಮೆ ಎಂದ ಹವಾಮಾನ ಇಲಾಖೆ
ಸದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೇ ಸಿಕ್ಕಿದೆ. MCG ಮೈದಾನ ವಾತಾವರಣ ತಿಳಿಯಾಗಿರಲಿದೆ ಮಳೆ ಸಾಧ್ಯತೆ ಕಡಿಮೆ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳಿದೆ. ಮೆಲ್ಬೋರ್ನ್‌ನಲ್ಲಿ ಮೋಡ ಕವಿದ ವಾತಾವರಣವಿರಬಹುದು, ಆದರೆ ದಿನ ಕಳೆದಂತೆ ವಾತಾವರಣ ತಿಳಿಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಪಂದ್ಯ ರದ್ದಾದರೆ?
ಇಂದು ನಡೆದ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ದಕ್ಷಿಣ ಆಫ್ರಿಕಾವನ್ನ ಸೋಲಿಸಿದೆ. ಈ ಮೂಲಕ ಭಾರತ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಪಂದ್ಯ ರದ್ದಾದರೂ ಎರಡೂ ತಂಡಗಳು 1-1 ಪಾಯಿಂಟ್ ಗಳನ್ನ ಹಂಚಿಕೊಳ್ಳಲಿವೆ. ಆಗ ಭಾರತದ ಪಾಯಿಂಟ್ 7 ಆಗಲಿದೆ.
ಅದೇ ಸಮಯದಲ್ಲಿ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಬೇಕಾಗಿದೆ. ಇದೀಗ ಆಫ್ರಿಕಾ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪಂದ್ಯದ ವಿಜೇತರು ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನ ಪಡೆಯಲಿದ್ದಾರೆ.
ind vs zim : India semi-final spot certain ?? There is no threat of rain for the match.








