IND VS ZIM : ಸುಂದರ್ ಸ್ಥಾನಕ್ಕೆ ಆರ್ ಸಿಬಿ ಆಲ್ ರೌಂಡರ್
ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದ ಸ್ಪಿನ್ ಆಲ್ ರೌಂಡರ್ ವಾಷಿಂಗ್ ಟನ್ ಸುಂದರ್ ಗಾಯಗೊಂಡಿದ್ದು, ಸರಣಿಯಿಂದ ದೂರವಾಗಿದ್ದಾರೆ.
ಹೀಗಾಗಿ ಅವರ ಸ್ಥಾನಕ್ಕೆ ಆರ್ ಸಿಬಿ ತಂಡದ ಆಲ್ ರೌಂಡರ್ ಶಹಬಾಜ್ ಅಹ್ಮದ್ ಅವರನ್ನ ಆಯ್ಕೆ ಮಾಡಲಾಗಿದೆ.
ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರ್ಭಟಿಸಿದ್ದ ವಾಷಿಂಗ್ ಟನ್ ಸುಂದರ್, ಟೀಂ ಇಂಡಿಯಾ ಪರ ಆಡಲು ಕಾಯುತ್ತಿದ್ದರು. ಇದೀಗ ಅವರ ಕಾಯುವಿಕೆಗೆ ಮುಕ್ತಿ ಸಿಕ್ಕಿದ್ದು, ಟೀಂ ಇಂಡಿಯಾ ಸೇರಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆರ್ ಸಿಬಿ ಪರ ಶಹ್ಬಾಜ್ 29 ಪಂದ್ಯಗಳನ್ನಾಡಿದ್ದಾರೆ.
118ರ ಸ್ಟ್ರೈಕ್ ರೇಟ್ ನಲ್ಲಿ 279 ರನ್ ಗಳಿಸಿದ್ದಾರೆ. 8.58ರ ಎಕನಾಮಿಯಲ್ಲಿ 13 ವಿಕೆಟ್ ಪಡೆದುಕೊಂಡಿದ್ದಾರೆ.
ಅಹ್ಮದ್ ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ ಮೂರು ಶತಕ, 10 ಅರ್ಧಶತಕಗಳನ್ನು ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ನೂರಕ್ಕೂ ಹೆಚ್ಚು ವಿಕೆಟ್ ಪಡೆದುಕೊಂಡಿದ್ದಾರೆ.








