World Cup 2022: 134 ರನ್ ಗಳಿಗೆ ಮಿಥಾಲಿ ಸೇನೆ ಆಲೌಟ್
134 ರನ್ ಗಳಿಗೆ ಮಿಥಾಲಿ ಸೇನೆ ಆಲೌಟ್
ಬ್ಯಾಟ್ಸ್ ಮನ್ ರಿಚಾ ಘೋಷ್ (33) ರನ್
ಭಾರತದ ಸ್ಮೃತಿ ಮಂಧಾನ 35 ರನ್
ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ
ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್-2022ರ ಅಂಗವಾಗಿ ಭಾರತ ಮಹಿಳಾ ತಂಡ, ಇಂಗ್ಲೆಂಡ್ ವಿರುದ್ಧ ಸೆಣಸಾಡುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಿಥಾಲಿ ಸೇನಾ 134 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.
ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಟಿಕಾ 11 ಎಸೆತಗಳಲ್ಲಿ 8 ರನ್ ಗಳಿಸಿ ಪೆವಿಲಿಯನ್ ತಲುಪಿದರು. ಅವರ ಸ್ಥಾನದಲ್ಲಿ ಕ್ರೀಸ್ ಗೆ ಬಂದ ನಾಯಕಿ ಮಿಥಾಲಿ ರಾಜ್ 5 ಎಸೆತಗಳನ್ನು ಎದುರಿಸಿ ಸಿಂಗಲ್ ರನ್ ಗಳಿಸಿದರು.
ದೀಪ್ತಿ ಶರ್ಮಾ ರನ್ ಖಾತೆ ತೆರೆಯದೆ ರನೌಟ್ ಆದರು. ಈ ಕ್ರಮದಲ್ಲಿ ಕ್ರೀಸ್ಗೆ ಬಂದ ಉಪನಾಯಕಿ ಹರ್ಮನ್ಪ್ರೀತ್ ಕೌರ್, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಜತೆಗೂಡಿ ಇನಿಂಗ್ಸ್ ಸುಧಾರಿಸಲು ಯತ್ನಿಸಿದರು.
ಆದರೆ ಇಂಗ್ಲೆಂಡ್ ಬೌಲರ್ ಚಾರ್ಲೊಟ್ ಡೀನ್ ಭಾರತ ತಂಡವನ್ನು ಕಾಡಿದರು. ಒಂದೇ ಓವರ್ ನಲ್ಲಿ ಹರ್ಮನ್ ಜೊತೆಗೆ ಸ್ನೇಹ ರಾಣಾ ಅವರು ಪೆವಿಲಿಯನ್ ಸೇರಿದರು.
ಆ ನಂತರ ಸೋಫಿ ಎಕ್ಲೆಸ್ಟೋನ್ ಬೌಲಿಂಗ್ನಲ್ಲಿ ಮಂಧಾನ (35) ಎಲ್ಬಿಡಬ್ಲ್ಯುಗೆ ಬಲಿಯಾದರು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಚಾ ಘೋಷ್ (33) ರನ್ ಔಟ್ ಆಗುವುದರೊಂದಿಗೆ ಭಾರತ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು.
ಜೂಲನ್ ಗೋಸ್ವಾಮಿ ಸ್ವಲ್ಪ ಹೊತ್ತು ಬ್ಯಾಟ್ ಬೀಸಿದ್ರೂ ಅವರ ಬೆಂಬಲಕ್ಕೆ ಯಾರೂ ನಿಂತಿಲ್ಲ.
ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಒಟ್ಟು 10 ರನ್ ಗಳಿಸಿದರು. ಭಾರತ 36.2 ಓವರ್ಗಳಲ್ಲಿ 134 ರನ್ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್ ಬೌಲರ್ಗಳಲ್ಲಿ ಚಾರ್ಲೊಟ್ ಡೀನ್ ನಾಲ್ಕು, ಶ್ರಬ್ಸೋಲ್ ಎರಡು, ಸೋಫಿ ಒಂದು ಮತ್ತು ಕೇಟ್ ಕ್ರಾಸ್ ಒಂದು ವಿಕೆಟ್ ಪಡೆದರು.