180.40 ಕೋಟಿ ಗಡಿ ದಾಟಿದ ಕೋವಿಡ್ ಲಸಿಕಾಕರಣ….
ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 180 ಕೋಟಿ 40 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ಗಳನ್ನು ನೀಡಲಾಗಿದೆ. ನಿನ್ನೆ 19 ಲಕ್ಷ 64 ಸಾವಿರ ಡೋಸ್ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಚೇತರಿಕೆ ದರವು ಪ್ರಸ್ತುತ 98.72 ಪ್ರತಿಶತದಲ್ಲಿದೆ. ಕಳೆದ 24 ಗಂಟೆಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4 ಕೋಟಿ 24 ಲಕ್ಷ 46 ಸಾವಿರದ 171ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು ಶೇಕಡಾ 0.08 ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು 0.37 % ಮತ್ತು ವಾರದ ಪಾಸಿಟಿವಿಟಿ ದರವು 0.46 % ಇದೆ. ಕಳೆದ 24 ಗಂಟೆಯಲ್ಲಿ 97 ಸಾವುಗಳು ವರದಿಯಾಗಿವೆ.
India administers over 180.80 crore COVID vaccine doses; Recovery rate stands at 98.73 percent