ಅಫ್ಗಾನ್ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡದಂತೆ ಪ್ರವೀಣ್ ತೊಗಾಡಿಯಾ ಒತ್ತಾಯ..!
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಭಾರತ , ಅಮೆರಿಕಾ ಸೇರಿದಂತೆ ಅನೇಕ ದೇಶಗಳು ಅಫ್ಗಾನ್ ನಿಂದ ಜನರ ಸ್ಥಳಾಂತರ ಕಾರ್ಯದಲ್ಲಿ ತೊಡಗಿವೆ.. ಈ ನಡುವೆ ಕಾಬುಲ್ ಅಂತರಾಷ್ಟ್ರೀಯ ವಿಮಾನನ ನಿಲ್ದಾಣದಲ್ಲಿ ಸರಿಣಿ ಬಾಂಬ್ ಸ್ಫೋಟಗಳು ಸಂಭವಿಸಿ ಅಮೆರಿಕಾದ 13 ಸೈನಿಕರು , ನಾಗರಿಕರೂ ಸೇರಿದಂತೆ 73 ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ.. ಈ ನಡುವೆ ಅಫ್ಗಾನಿಸ್ತಾನದಿಂದ ಬರುವ ಮುಸ್ಲಿಂ ಪ್ರಜೆಗಳಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ನ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ – 13 ಅಮೆರಿಕಾ ಯೋಧರು ಸೇರಿ 72 ಸಾವು – ಸೇಡು ತೀರಿಸಿಕೊಳ್ಳುವುದಾಗಿ ಬೈಡೆನ್ ಪ್ರತಿಜ್ಞೆ..!
ಆದರೆ ಅಲ್ಲಿಂದ ಬರುವ ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಭಾರತವು ಗಡಿಯನ್ನು ತೆರೆದಿರಿಸಬೇಕು ಎಂದು ಹೇಳಿದ್ದಾರೆ. ಅಲ್ಲದೇ ಭಾರತವು ತಾಲಿಬಾನ್ ಉದ್ದೇಶದ ಕೇಂದ್ರಬಿಂದುವಾಗಿರುವುದರಿಂದ ದೇಶವು ಬಹಳ ದೊಡ್ಡ ಅಪಾಯ ಎದುರಿಸುತ್ತಿದೆ. ಆದ್ದರಿಂದ ದೇಶವು ತಾಲಿಬಾನೀಕರಣ ಆಗುವುದನ್ನು ತಡೆಯಬೇಕಿದೆ ಎಂದಿದ್ದಾರೆ.








