ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಅವರು INDIA ಮೈತ್ರಿಕೂಟದ ಪ್ರಸ್ತುತ ಸ್ಥಿತಿಯನ್ನು ಗಂಭೀರವಾಗಿ ಟೀಕಿಸಿದ್ದಾರೆ. HT ಲೀಡರ್‌ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿಕೂಟದ ಒಳರಾಜಕೀಯ, ಪರಸ್ಪರ ಅಸಮಾಧಾನಗಳು ಹಾಗೂ ಕೆಲವು ಪಕ್ಷಗಳ ದೂರವಾಗುತ್ತಿರುವ ನಿಲುವು ಸೇರಿದಂತೆ ಮೈತ್ರಿಕೂಟದ ಸ್ಥಿತಿ ಲೈಫ್ ಸಪೋರ್ಟ್ ಮಟ್ಟಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ನನ್ನನ್ನು ಮೈತ್ರಿಕೂಟದ ಸಂಚಾಲಕರಾಗಿ ಮಾಡಲು ಕೆಲವು ನಾಯಕರು ವಿರೋಧಿಸಿದ್ದರು ಎಂದು ಅವರು ಸ್ಪೋಟಕ ಆರೋಪ ಮಾಡಿದ್ದಾರೆ.
ಬಿಹಾರ ಮಹಾಘಟಬಂಧನಕ್ಕೆ JMM ಸೇರಲಿಲ್ಲ. ಮುಂದೆ ಅದು ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟ ತೊರೆದರೆ, ಅದಕ್ಕೆ ಯಾರ ಹೊಣೆ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ಸಮಸ್ಯೆಗಳ ಮೂಲ INDIA ಮೈತ್ರಿಕೂಟವೇ. ಎಲ್ಲರೂ ಒಂದಾಗಿ ನಿಲ್ಲುವ ಬದಲಾಗಿ, ಒಳಸಂಘರ್ಷ, ಹೇಳಿಕೆ-ಪ್ರತಿಹೇಳಿಕೆಗಳು, ಸಂಯೋಜನೆಯ ಕೊರತೆ ಈ ಕಾರಣಗಳಿಂದ ಮೈತ್ರಿಕೂಟದ ಬಲ ಕುಂದಿದೆ ಎಂದು ಸ್ಪಷ್ಟಪಡಿಸಿದರು.
ಲೋಕಸಭಾ ಹಾಗೂ ರಾಜ್ಯ ರಾಜಕೀಯದ ಹಿನ್ನಲೆಯಲ್ಲಿ ಒಮರ್ ಅವರ ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.








