ಸೌದಿ ಅರೇಬಿಯಾದ ಹೊಸ 20 ರಿಯಾಲ್ ಕರೆನ್ಸಿಗೆ ವಿರೋಧ ವ್ಯಕ್ತಪಡಿಸಿದ ಭಾರತ 20 Riyal banknote
ಹೊಸದಿಲ್ಲಿ, ಅಕ್ಟೋಬರ್30: ಸೌದಿ ಅರೇಬಿಯಾ ಸರ್ಕಾರವು ಹೊರಡಿಸಿದ ಹೊಸ 20 ರಿಯಾಲ್ ಕರೆನ್ಸಿಗೆ ಭಾರತ ವಿರೋಧ ವ್ಯಕ್ತಪಡಿಸಿದೆ. ಏಕೆಂದರೆ ಇದು ಜಮ್ಮು ಕಾಶ್ಮೀರ ಕೇಂದ್ರ ಪ್ರದೇಶಗಳು ಮತ್ತು ಲಡಾಖ್ ಅನ್ನು ಭಾರತದ ಭೂಪ್ರದೇಶದ ಹೊರಗೆ ಚಿತ್ರಿಸಿದೆ. 20 Riyal banknote
ಸೌದಿ ಅರೇಬಿಯನ್ ಹಣಕಾಸು ಪ್ರಾಧಿಕಾರವು ಹೊರಡಿಸಿದ ಹೊಸ ನೋಟಿಗೆ ಆರಂಭದಲ್ಲಿ ಭಾರತದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ಅದರ ಮೇಲೆ ಮುದ್ರಿತವಾದ ವಿಶ್ವ ನಕ್ಷೆಯಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕಾಶ್ಮೀರದ ಕೆಲವು ಪ್ರದೇಶಗಳನ್ನು ಪಾಕಿಸ್ತಾನದ ಭಾಗಗಳಾಗಿ ತೋರಿಸಿರಲಿಲ್ಲ. ಆದಾಗ್ಯೂ, ನೋಟಿನಲ್ಲಿನ ನಕ್ಷೆಯು ಲಡಾಖ್ ಮತ್ತು ಜೆ & ಕೆ ಗಳನ್ನು ಭಾರತದ ಭೂಪ್ರದೇಶದ ಹೊರಗೆ ಇಟ್ಟಿರುವುದು ನಂತರ ಗಮನಕ್ಕೆ ಬಂದಿತು.
ಭಾರತ ಈಗ ಸೌದಿ ಅರೇಬಿಯಾ ಸರ್ಕಾರಕ್ಕೆ ಪ್ರತಿಭಟನೆ ಸಲ್ಲಿಸಿದ್ದು, ತಕ್ಷಣವೇ ನೋಟು ಹಿಂಪಡೆಯಲು ಮತ್ತು ಭಾರತದ ಸರಿಯಾದ ನಕ್ಷೆಯೊಂದಿಗೆ ಮರುಹಂಚಿಕೆ ಮಾಡಲು ಹೇಳಿದೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯೊಳಗೆ ಮೊಳಗಿದ ಮೋದಿ ಘೋಷಣೆ ? ನಿಜವಾಗಿ ಅಲ್ಲಿ ನಡೆದದ್ದೇನು ?
ಸೌದಿ ಅರೇಬಿಯಾದ ಜಿ 20 ಅಧ್ಯಕ್ಷತೆಯ ನೆನಪಿಗಾಗಿ ಈ ನೋಟು ಹೊರಡಿಸಲಾಗಿದೆ. ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಮುಂದಿನ ತಿಂಗಳು ಜಿ 20 ಶೃಂಗಸಭೆಯನ್ನು ಆಯೋಜಿಸಲಿದ್ದಾರೆ.
ನೋಟಿನಲ್ಲಿ ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಭಾರತದ ರಿಯಾದ್ ರಾಯಭಾರಿ ಮೂಲಕ ಮತ್ತು ಸಾಮ್ರಾಜ್ಯದ ರಾಜಧಾನಿಯಲ್ಲಿರುವ ಭಾರತದ ರಾಯಭಾರ ಕಚೇರಿಯ ಮೂಲಕ ಮೋದಿ ಸರ್ಕಾರ ಸೌದಿ ಅರೇಬಿಯಾಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದೆ.
ಸೌದಿ ಅರೇಬಿಯಾದ ಅಧಿಕೃತ ಮತ್ತು ಕಾನೂನುಬದ್ಧ ನೋಟಿನ ಮೇಲೆ ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ಸಂಪೂರ್ಣವಾಗಿ ತಪ್ಪಾಗಿ ಚಿತ್ರಿಸಿರುವ ಬಗ್ಗೆ ನವದೆಹಲಿ ತನ್ನ ಗಂಭೀರ ಕಳವಳವನ್ನು ತಿಳಿಸಿದೆ. ಈ ನಿಟ್ಟಿನಲ್ಲಿ ತುರ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಸೌದಿ ಅರೇಬಿಯಾ ಸರ್ಕಾರವನ್ನು ಕೇಳಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ ಎಂದು ಅವರು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ