ಯೂಟ್ಯೂಬ್ ಚಾನಲ್ ಗಳನ್ನು ಬ್ಯಾನ್ ಮಾಡಿದ ಭಾರತ
ನವದೆಹಲಿ: ದೇಶದಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ 22 ಯೂಟ್ಯೂಬ್ ಚಾನಲ್ ಗಳನ್ನು ಭಾರತ ಸರಕಾರ ಐಟಿ ನಿಯಮದ 2021ರ ಅಡಿ ಬ್ಯಾನ್ ಮಾಡಿದ್ದಾರೆ.
ಭಾರತೀಯ ಶಸತ್ರ ಪಡೆ, ಜಮ್ಮು&ಕಾಶ್ಮೀರದಂತಹ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿ ಪ್ರಸಾರ ಮಾಡುತ್ತಿದ್ದ 18 ಭಾರತೀಯ ಯೂಟ್ಯೂಬ್ ಚಾನೆಲ್ ಗಳನ್ನು ಬ್ಯಾನ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಐಟಿ ನಿಯಮ, 2021 ರ ಅಡಿಯಲ್ಲಿ ಬ್ಯಾನ್ ಮಾಡಿದ್ದು, ಪಾಕಿಸ್ತಾನದ 4 ಯೂಟ್ಯೂಬ್ ನ್ಯೂಸ್ ಚಾನೆಲ್‌ಗಳನ್ನು ಕೂಡಾ ನಿರ್ಬಂಧಿಸಲಾಗಿದೆ ಎಂದು ಸರಕಾರ ತಿಳಿಸಿದೆ.
https://twitter.com/WorldDailyNB/status/1511297940949590026
ಈ ಯೂಟ್ಯೂಬ್ ಚ್ಯಾನೆಲ್‌ಗಳು ಉಕ್ರೇನ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದೆ. ಇದು ಭಾರತದೊಂದಿಗಿನ ವಿದೇಶೀ ಸಂಬಂಧಗಳನ್ನು ಅಪಾಯಕ್ಕೆ ತಳ್ಳುವ ಗುರಿ ಹೊಂದಿದೆ ಎಂದು ಸರ್ಕಾರ ಆಘಾತ ವ್ಯಕ್ತಪಡಿಸಿದೆ.








