ಯುಎನ್ ಕಾರ್ಯಸೂಚಿಯಿಂದ ಜಮ್ಮು & ಕಾಶ್ಮೀರದ ಸಮಸ್ಯೆಯನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಭಾರತ ಕರೆ
ಹೊಸದಿಲ್ಲಿ, ಸೆಪ್ಟೆಂಬರ್ 02: ಭದ್ರತಾ ಮಂಡಳಿಯ ಕಾರ್ಯಸೂಚಿಯಿಂದ ಭಾರತ-ಪಾಕಿಸ್ತಾನ ಪ್ರಶ್ನೆಯ ಹಳೆಯ ಕಾರ್ಯಸೂಚಿಯ ಐಟಂ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಶಾಶ್ವತವಾಗಿ ತೆಗೆದುಹಾಕಬೇಕೆಂದು ಯುಎನ್ ನಲ್ಲಿ ಭಾರತ ಕರೆ ನೀಡಿದೆ. ಅಂತಹ ತರ್ಕಬಾಹಿರ ವಿಷಯಗಳ ಬಗ್ಗೆ ಉತ್ಸಾಹ ಘನತೆವೆತ್ತ ಜಗತ್ತಿನಲ್ಲಿ ಯಾರಿಗೂ ಇಲ್ಲ ಎಂದು ಭಾರತ ತಿಳಿಸಿದೆ.
ಪಾಕಿಸ್ತಾನದ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ ಭಾರತವು ಕೆಲವು ರಾಷ್ಟ್ರಗಳು ಅಂತರರಾಷ್ಟ್ರೀಯ ಶಾಂತಿಗೆ ಕೊಡುಗೆ ನೀಡುವಂತೆ ಪದೇ ಪದೇ ರೀಬ್ರ್ಯಾಂಡ್ ಮಾಡಲು ಪ್ರಯತ್ನಿಸುತ್ತದೆ. ಆದರೆ ದುರದೃಷ್ಟವಶಾತ್ ಅದು ಅಂತರರಾಷ್ಟ್ರೀಯ ಭಯೋತ್ಪಾದನೆಯ ಕಾರಂಜಿ ಮತ್ತು ಭಯೋತ್ಪಾದಕ ಸಿಂಡಿಕೇಟ್‌ಗಳ ಕೇಂದ್ರವೆಂದು ಜಾಗತಿಕವಾಗಿ ಹೆಸರುವಾಸಿಯಾಗಿದೆ ಎಂಬುದನ್ನು ಮರೆತಿದೆ ಎಂದು ಹೇಳಿತು.
ಭದ್ರತಾ ಮಂಡಳಿಯ ವಾರ್ಷಿಕ ವರದಿಯ ಕುರಿತಾದ ಸಮಗ್ರ ಅನೌಪಚಾರಿಕ ಸಭೆಯಲ್ಲಿ, ಪಾಕಿಸ್ತಾನದ ಯುಎನ್ ರಾಯಭಾರಿ ಮುನೀರ್ ಅಕ್ರಮ್ ಅವರು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಎತ್ತಿ ಹಿಡಿದಿದ್ದು, ಭದ್ರತಾ ಮಂಡಳಿಯು ತನ್ನದೇ ಆದ ನಿರ್ಣಯಗಳು ಮತ್ತು ನಿರ್ಧಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಕೊರತೆಯಿದೆ ಎಂದು ಹೇಳಿದ್ದಾರೆ.
ಕೌನ್ಸಿಲ್ನಲ್ಲಿ ಹಳತಾದ ಕಾರ್ಯಸೂಚಿಯ ಐಟಂ ಕುರಿತು ಚರ್ಚೆಗೆ ನಿಯೋಗ ಒತ್ತಾಯಿಸುತ್ತಿದೆ. ಇದನ್ನು ಕೌನ್ಸಿಲ್ ನ ಕಾರ್ಯಸೂಚಿಯಿಂದ ಶಾಶ್ವತವಾಗಿ ತೆಗೆದುಹಾಕಬೇಕಾಗಿದೆ. ಅಂತಹ ತರ್ಕಬಾಹಿರ ವಿಷಯಗಳ ಅಗತ್ಯ ಜಗತ್ತಿನಲ್ಲಿ ಯಾರಿಗೂ ಇಲ್ಲ ಎಂದು ಭಾರತವು 2019 ರ ಭದ್ರತಾ ಮಂಡಳಿಯ ವರದಿಯಲ್ಲಿ ಹೇಳಿದೆ.
ಆಗಸ್ಟ್ 3, 2020 ರ ಸೆಕ್ರೆಟರಿ ಜನರಲ್ ಅವರ ಸೆಕ್ಯುರಿಟಿ ಕೌನ್ಸಿಲ್ ನಲ್ಲಿ ಜನವರಿ 1, 2017 ರಿಂದ ಆಗಸ್ಟ್ 1, 2020 ರವರೆಗೆ ಭಾರತ-ಪಾಕಿಸ್ತಾನ ಕ್ವಶ್ಚನ್ ಎಂದು ಪಟ್ಟಿಮಾಡಲ್ಪಟ್ಟಿದೆ. 1948ರ ಜನವರಿ 6ರ ಔಪಚಾರಿಕಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಯುಎನ್ಎಸ್ಸಿ ಅಜೆಂಡಾಕ್ಕೆ ಜಮ್ಮು-ಕಾಶ್ಮೀರದ ವಿಚಾರ ಸೇರಿಸಲ್ಪಟ್ಟಿತ್ತು ಮತ್ತು ಪಾಕಿಸ್ತಾನ ಬೆಂಬಲಕ್ಕೆ ಅಂದು ಅದರ ಸಾರ್ವಕಾಲಿಕ ಮಿತ್ರ ಚೀನಾ ನಿಂತಿತು.








