India – China Border Clash : ಗಡಿಯಲ್ಲಿ ಮತ್ತೆ ಸಂಘರ್ಷ – 30 ಕ್ಕೂ ಹೆಚ್ಚು ಯೋಧರಿಗೆ ಗಾಯ
ಭಾರತ-ಚೀನಾ ಗಡಿಯಲ್ಲಿ ಮತ್ತೆ ಸಂಘರ್ಷ
30ಕ್ಕೂ ಹೆಚ್ಚು ಸೇನಾ ಯೋಧರಿಗೆ ಗಾಯ
ಉಭಯ ದೇಶಗಳ 30 ಕ್ಕೂ ಹೆಚ್ಚು ಯೋಧರಿಗೆ ಗಾಯ
ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಘರ್ಷಣೆ
ಡಿಸೆಂಬರ್ 9 ರಂದು ಘಟನೆ , ತಡವಾಗಿ ಬೆಳಕಿಗೆ
ಕಂಡೋರ ಭೂಮಿಯನ್ನ ಕಬಳಿಸಲು ಸದಾ ಹವಣಿಸುವ ಚೀನಾಗೆ ಭಾರತದ ಭೂಮಿ ಮೇಲೆಯೂ ದುರಾಸೆ ಇರೋದು ಜಗತ್ತಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಎಷ್ಟೇ ಬಾರಿ ನಮ್ಮ ಸೇನೆಯನ್ನ ಕೆಣಕಿಕೊಂಡು ಬಂದ್ರೂ ಅಷ್ಟೂ ಬಾರಿಯೂ ಮುಟ್ಟಿನೋಡಿಕೊಳ್ಳೋ ಹಾಗೆ ನಮ್ಮ ವೀರ ಯೋಧರು ಉತ್ತರ ಕೊಟ್ಟಿದ್ದಾರೆ..
ಇಷ್ಟಾದ್ರೂ ಚೀನಾದವರಿಗೆ ಮಾತ್ರ ಬುದ್ದಿ ಬಂದಿಲ್ಲ..
ಡಿಸೆಂಬರ್ 9 ರಂದು ಮತ್ತೊಮ್ಮೆ ಕಾಲು ಕೆರೆದುಕೊಂಡು ಗಲಾಟೆಗೆ ಬಂದಿದ್ದಾರೆ… ಅವರಿಗೆ ಸರಿಯಾದ ಪ್ರತ್ಯುತ್ತರವನ್ನೇ ನಮ್ಮ ಯೋಧರು ನೀಡಿದ್ದಾರೆ..
ಆದ್ರೆ ಗಡಿ ಘರ್ಷಣೆಯಲ್ಲಿ ಉಭಯ ದೇಶಗಳ 30 ಕ್ಕೂ ಹೆಚ್ಚು ಸೈನಿಕರಿಗೆ ಗಾಯಗಳಾಗಿವೆ..
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಗಲಾಟೆ ನಡೆದ ಬಗ್ಗೆ ಭಾರತೀಯ ಸೇನೆ (Indian Army) ದೃಢಪಡಿಸಿದೆ.
ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿ ಭಾಗ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಡಿಸೆಂಬರ್ 9ರಂದು ಶುಕ್ರವಾರ ತಡರಾತ್ರಿ ಚೀನಾ ಹಾಗೂ ಭಾರತೀಯ ಸೇನಾ ಯೋಧರ ನಡುವೆ ಸಂಘರ್ಷ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘರ್ಷಣೆಯಲ್ಲಿ ಭಾರತ ಹಾಗೂ ಚೀನಾ ದೇಶದ 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಈ ಗಲಾಟೆ ನಡೆದ ಬಳಿಕ ಉಭಯ ದೇಶದ ಸೇನಾಧಿಕಾರಿಗಳು ಫ್ಲ್ಯಾಗ್ ಮೀಟಿಂಗ್ ನಡೆಸಿ ಶಾಂತಿ ಕಾಪಾಡಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ..
India – China Border Clash , 30 + soldiers injured








