India China Border Clash : ಭಾರತದೊಂದಿಗಿನ ಗಡಿ ಪರಿಸ್ಥಿತಿ ಬಗ್ಗೆ ಚೀನಾ ಪ್ರತಿಕ್ರಿಯೆ..!!
ಗಡಿಯಲ್ಲಿ ಸುಖಾ ಸುಮ್ಮನೆ ಚೀನಾ ಖ್ಯಾತೆ ತೆಗುತ್ತಲೇ ಇದೆ.. ಡಿಸೆಂಬರ್ 9 ರಂದು ಚೀನೀಯರು ಕಾಲು ಕೆರೆದುಕೊಂಡು ಗಲಾಟೆಗೆ ಬಂದಿದ್ದು , ಉಂಟಾದ ಸಂಘರ್ಷದಲ್ಲಿ ಅವರಿಗೆ ತಕ್ಕ ಪ್ರತಿಕ್ರಿಯೆಯನ್ನೇ ನಮ್ಮ ಭಾರತೀಯ ಸೈನಿಕರು ನೀಡಿದ್ದಾರೆ.. ಈ ಘರ್ಷಣೆಯಲ್ಲಿ ಉಭಯ ರಾಷ್ಟ್ರಗಳ 30 ಕ್ಕೂ ಅಧಿಕ ಸೈನಿಕರಿಗೆ ಗಾಯಗಳಾಗಿದ್ದು , ಇದೀಗ ಈ ಸಂಬಂಧ ಚೀನಾ ಪ್ರತಿಕ್ರಿಯೆ ನೀಡಿದೆ..
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಪ್ರತಿಕ್ರಿಯೆ ನೀಡಿದ್ದು , ಭಾರತದೊಂದಿಗೆ ನಮ್ಮ ಗಡಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ..
ಎರಡೂ ಕಡೆಯ ಸಚಿವರು ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಗಡಿ ಸಮಸ್ಯೆಯ ಬಗ್ಗೆ ಮಾತುಕತೆಯನ್ನು ನಡೆಸಿದ್ದೇವೆ. ಎರಡೂ ಕಡೆಯವರು ಸಹಿ ಮಾಡಿದ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚೀನಾ-ಭಾರತದ ಗಡಿ ಪ್ರದೇಶದ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿಹಿಡಿಯಬೇಕು ಎಂದಿದ್ದಾರೆ..
India China Border Clash , china reacts , saakshatv








