ನವದೆಹಲಿ: ಚೀನಾ-ಭಾರತ ಗಡಿ ವಿವಾದ ಗಂಭೀರವಾಗಿದೆ. ನಮಗೆ ಶಾಂತಿಯುತ ಪರಿಹಾರ ಬೇಕಿದೆ ಎಂದು ರಕ್ಷಣಾ ಸಚಿವರಾಜ ನಾಥ್ ಸಿಂಗ್ ಅವರು ಸಂಸತ್ ನಲ್ಲಿ ಹೇಳಿದ್ದಾರೆ.
ಚೀನಾ-ಭಾರತ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ. ಇನ್ನು ಚೀನಾ ಸೇನೆ ನಿಯೋಜನೆ ಏಪ್ರಿಲ್ನಿಂದ ಹೆಚ್ಚಳವಾಗಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹ ಹೆಚ್ಚಿಸಿದೆ.
ಹಾಗಾಗಿ ಯಥಾಸ್ಥಿತಿ ಕಾಪಾಡಲು ಭಾರತ ಎಚ್ಚರಿಕೆ ನೀಡಿದೆ ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ರಾಜನಾಥ್ ಸಿಂಗ್ ಅವರು ಲಡಾಖ್ ಗೆ ಪ್ರಧಾನಿ ಮೋದಿ ಭೇಟಿ ನೀಡಿ ದೇಶದ ಜನರು ಸೇನೆ ಜೊತೆ ಇರುವುದಾಗಿ ಸೈನಿಕರಿಗೆ ಧೈರ್ಯ ತುಂಬಿದ್ದರು.
ಗಡಿಯಲ್ಲಿ ನಮ್ಮ ಸೈನಿಕರು ತಕ್ಕ ಉತ್ತರ ನೀಡ್ತಿದ್ದು, ನಮ್ಮ ಯೋಧರು ಸಂಯಮ, ಶೌರ್ಯ ಪ್ರದರ್ಶಿಸಿದ್ದಾರೆ ಎಂದಿದ್ದಾರೆ. ಅಲ್ಲದೇ ಗಡಿ ವ್ಯಾಪ್ತಿಯಲ್ಲಿ ಸೇನೆ ಸರ್ವ ಸನ್ನದ್ಧವಾಗಿದೆ. ಯಾವುದೇ ಪರಿಸ್ಥಿತಿಯನ್ನೂ ಎದುರಿಸಲು ನಾವು ಸಿದ್ಧ. ಇಡೀ ದೇಶವೇ ನಮ್ಮ ಸೈನಿಕರ ಜೊತೆಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.