ಭಾರತದಲ್ಲಿ ಮುಂದುವರೆದ ಕೊರೊನಾ ರಣಕೇಕೆ – ಒಂದೇ ದಿನ 3, 645 ಮಂದಿ ಬಲಿ
ನವದೆಹಲಿ : ದೇಶದಲ್ಲಿ ಕೋವಿಡ್ 2 ನೇ ಅಲಿ ಅತಿ ಭೀಕರವಾಗಿ ಅಪ್ಪಳಿಸಿದ್ದು, ಕೊರೊನಾ ಮರಣ ಮೃದಂಗ ಮೊಳಗಿದೆ. ದೇಶದಲ್ಲಿ ಕಳೆದ ಒಂದು ದಿನದಲ್ಲಿ 3,79,257 (3.8 ಲಕ್ಷ ) ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 3, 645 ಮಂದಿ ಸಾವಿಗೀಡಾಗಿದ್ದಾರೆ.
ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ ಪ್ರತಿದಿನ 3.5 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 2,59,507 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 1,50,86,878ಕ್ಕೆ ಏರಿಕೆಯಾಗಿದೆ.
ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಎಂ.ಚಂದ್ರಶೇಖರ್ ಕೊರೊನಾಗೆ ಬಲಿ