ವಿಶ್ವಕ್ಕಿಂತ ಭಾರತ ಹೇಗೆ ಭಿನ್ನ… ಯಾವುದ್ರಲ್ಲಿ ಉತ್ತಮ..! Interesting Facts
ವಿಶ್ವದ ಬಹುದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶ… ಕಬಡ್ಡಿಯಲ್ಲಿ 6 ವಿಶ್ವಕಪ್ ಟ್ರೋಫಿ ಗೆದ್ದಿದ್ದು ನಮ್ಮ ಭಾರತವೇ..ವಿಶ್ವಕ್ಕಿಂತ ಭಾರತ ಹೇಗೆ ಭಿನ್ನ… ಯಾವುದ್ರಲ್ಲಿ ಉತ್ತಮ..!
ವಿವಿಧತೆಯಲ್ಲಿ ಏಕತೆ… ಅನೇಕ ಶ್ರೀಮಂತ ಪರಂಪರೆ , ಸಂಪ್ರದಾಯ , ಸಂಸ್ಕೃತಿಗಳ ಆಗರ , ಸಾವಿರಾರು ಭಾಷೆ, ಪ್ರಾಕೃತಿಕ ಸೌಂದರ್ಯ ಇರಲಿ , ಸೌಜನ್ಯವಿರಲಿ , ಏಕತೆಯಿರಲಿ ವಿಶ್ವಕ್ಕೆ ಮಾದರಿ ನಮ್ಮ ಹೆಮ್ಮೆಯ ಭಾರತ…
ಇಡೀ ವಿಶ್ವದಲ್ಲೇ ವಿಭಿನ್ನ ದೇಶವಾದ್ರೂ ಇಡೀ ವಿಶ್ವಕ್ಕೆ ಅನೇಕ ವಿಚಾರಗಳಲ್ಲಿ ಮಾದರಿ ನಮ್ಮ ಇಂಡಿಯಾ…
ಹೀಗಾಗಿ ಬೇರೆ ದೇಶಗಳ ವಿಭಿನ್ನತೆ , ಆಚಾರ ,ವಿಚಾರ ,ಸಂಪ್ರದಾಯಗಳನ್ನ ತಿಳಿಯುವುದಕ್ಕು ಮೊದಲು ನಾವು ನಮ್ಮದೇ ದೇಶದ ಬಗ್ಗೆ ಅನೇಕ ವಿಚಾರಗಳು , ಕುತೂಹಲಕಾರಿ ಸಂಗತಿಗಳನ್ನ ತಿಳಿಯೋಣ..
ಬಹುತೇಕ ದೇಶಗಳಲ್ಲಿ 3 – 4 ಭಾಷೆಗಳೇ ಪ್ರಚಲಿತದಲ್ಲಿರುತ್ತೆ.. ಆದ್ರೆ ನಮ್ಮ ಭಾರತದಲ್ಲಿ ಒಂದಲ್ಲ – ಎರೆಡಲ್ಲ – ನೂರಲ್ಲ ಸಾವಿರಾರು ಬಾಷೆಗಳಿವೆ.. ಇಡೀ ವಿಶ್ವದಲ್ಲೇ ಒಟ್ಟು ಸುಮಾರು 8000 ಭಾಷೆಗಳನ್ನ ಮಾತನಾಡಲಾಗುತ್ತದೆ.. ಆದ್ರೆ ನಮ್ಮ ದೇಶವೊಂದ್ರಲ್ಲೇ ಸುಮಾರು 1600 ಭಾಷೆಗಳನ್ನ ಮಾತನಾಡಲಾಗುತ್ತೆ..
ಇಷ್ಟೂ ಭಾಷೆಗಳ ಪೈಕಿ ಸುಮಾರು 122 ಭಾಷೆಗಳನ್ನ ಪ್ರಮುಖ ಭಾಷೆಗಳನ್ನಾಗಿ ಪರಿಗಣಿಸಲಾಗುತ್ತದೆ.. ಅದ್ರಲ್ಲಿ ಕನ್ನಡ , ತಮಿಳು, ತೆಲುಗು, ಹಿಂದಿ, ಮಳಯಾಳಂ, ಮರಾಠಿ ಭಾಷೆಗಳೂ ಸೇರಿವೆ..
ಆದ್ರೂ ಭಾರತಕ್ಕೆ ಇನ್ನೂವರೆಗೂ ಯಾವುದೇ ಅಧಿಕೃತ ಭಾಷೆಯಿಲ್ಲ.. ಭಾರತ ಇಡೀ ವಿಶ್ವದಲ್ಲೇ ಶಾಂತಿ ಪ್ರಿಯ ರಾಷ್ಟ್ರ ಎಂಬ ಪ್ರಸಿದ್ಧಿ ಪಡೆದಿದೆ. ಈ ವಿಚಾರದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ.. ಹಾಗೇ ನೋಡೋದಾದ್ರೆ ಭಾರತ 10,000 ವರ್ಷದ ಇತಿಹಾದಲ್ಲೇ ಯಾವುದೇ ದೇಶದ ಮೇಲೂ ಕೂಡ ಮೊದಲ ಯುದ್ಧ ಸಾರಿಲ್ಲ.. ಆದ್ರೆ ಅನೇಕ ದೇಶಗಳು ನಮ್ಮ ಮೇಲೆ ದಾಳಿ ಮಾಡಿವೆ.. ನಮ್ಮ ಮೇಲೆ ದಬ್ಬಾಳಿಕೆ ಮಾಡಿವೆ.. ನಮ್ಮ ದೇಶವನ್ನ ಆಳಿವೆ.. ನಮ್ಮನ್ನ ಲೂಟಿ ಮಾಡಿವೆ..
ಹಾಗಂತ ನಮ್ಮ ದೇಶ ನಮ್ಮ ಮೇಲೆ ದಬ್ಬಾಳಿಕೆ ನಡೆದಾಗ , ದಾಳಿ ಮಾಡಿದ ನಂತರ ಸುಮ್ಮನೆ ಶಾಂತಿಯುತವಾಗಿರಲಿಲ್ಲ.. ಆಗ ನಾವು ಕೂಡ ತಕ್ಕ ಉತ್ತರ ಕೊಟ್ಟಿದ್ದೇವೆ.. ನಮ್ಮ ದೇಶದ ವೀರರು ಕೂಡ ತಕ್ಕ ಉತ್ತರವನ್ನೇ ನೀಡಿದ್ದಾರೆ.. ಇದಕ್ಕೆ ಕಾರ್ಗಿಲ್ ನಂತಹ ಯುದ್ಧಗಳು ಸಾಕ್ಷಿ… 2019 ರಲ್ಲಿ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನ ಹೊಡೆದುರುಳಿಸಿದ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ..
ಇಡೀ ವಿಶ್ವದ ಬಹು ದೊಡ್ಡ ಲೋಕತಂತ್ರ ಹೊಂದಿರುವ ದೇಶ ಭಾರತ.. ವಿಶ್ವದ ಬಹುದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶವೂ ನಮ್ಮದೇ.. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ದೇಶವೂ ಕೂಡ ನಮ್ಮದೇ.. ಏಷ್ಯಾದಲ್ಲೇ ಅತಿ ದೊಡ್ಡ ರೈಲ್ವೇ ನೆಟ್ ವರ್ಕ್ ಕೂಡ ಭಾರತದ್ದೇ.. ಇಡೀ ವಿಶ್ವದಲ್ಲಿ ಅಮೆರಿಕಾ ನಂತರ ಈ ವಿಚಾರದಲ್ಲಿ 2ನೇ ಸ್ಥಾನದಲ್ಲಿದೆ.. ಇದು ಹೆಮ್ಮೆಯ ಸಂಗತಿ..
ಇನ್ನೂ ಆಶ್ಚರ್ಯ ಅಂದ್ರೆ ಭಾರತೀಯ ರೈಲ್ವೇ ಇಲಾಖೆಯಲ್ಲೇ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಉದ್ಯೋಗಿಗಳಿದ್ದಾರೆ.. ಸುಮಾರು 16 ಲಕ್ಷ ಜನರು ಭಾರತೀಯ ರೈಲ್ವೇ ಇಲಾಖೆಯಲ್ಲಿ ನೌಕರರಿದ್ದಾರೆ.. ಇದು ಅನೇಕ ದೇಶಗಳ ಒಟ್ಟಾರೆ ಜನಸಂಖ್ಯೆಗಿಂತಲೂ ಹೆಚ್ಚು..
ಭಾರತದಲ್ಲಿ ಕ್ರಿಕೆಟ್ ಮೇಲೆ ಜನರಿಗೆ ಹೆಚ್ಚು ಕ್ರೇಜ್ ಇದೆ.. ಯಾರು ನೋಡಿದ್ರೂ ಇಲ್ಲಿ ಕ್ರಿಕೆಟ್ ಪ್ರಿಯರೇ ಇರುತ್ತಾರೆ.. ಮತ್ತೊಂದು ಬಾಲಿವುಡ್ ಇಡೀ ವಿಶ್ವಾದ್ಯಂತ ಫೇಮಸ್.. ಆದ್ರೆ ಈ ನಡುವೆ ಭಾರತ ಕಬಡ್ಡಿಯಲ್ಲೂ ಮಾಸ್ಟರ್ ಅನ್ನೋದು ಅನನೇಕರಿಗೆ ಗೊತ್ತಿಲ್ಲ. ಹೆಮ್ಮೆಯ ವಿಚಾರ ಅಂದ್ರೆ ಇದುವರೆಗೂ ನಡೆದಿರುವ 6ಕ್ಕೆ 6 ಕಬಡ್ಡಿ ವಿಶ್ವ ಕಪ್ ಗಳನ್ನೂ ಕೂಡ ಭಾರತವೇ ಗೆದ್ದಿದೆ.. ಹೀಗಾಗಿ ನಮ್ಮ ಹೆಮ್ಮೆಯ ಬಾರತದ ಕಬಡ್ಡಿ ಟೀಮ್ ಗೆ ನಮ್ಮದೊಂದು ಸಲಾಮ್..
ನಮ್ಮ ದೇಶದಲ್ಲಿ ಇಡೀ ವಿಶ್ವದ ಅತ್ಯಂತ ದೊಡ್ಡ ಕ್ರೀಡಾಂಗಣವಿದೆ.. ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.. ಈ ಸ್ಟೇಡಿಯಂನಲ್ಲಿ ಒಂದೇ ಬಾರಿಗೆ 1 ಲಕ್ಷಕ್ಕೂ ಹೆಚ್ಚು ಮಂದಿ ಕೂತು ಆಟವನ್ನ ವೀಕ್ಷಣೆ ಮಾಡಬಹುದು..
ಈ ಸ್ಟೇಡಿಯಮ್ ಹೊಸದಾಗಿ ಮಾಡಲಾಗಿದ್ದು, ಸುಮಾರು 700 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.. ಇದಕ್ಕೂ ಮೊದಲು ವಿಶ್ವದ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆ ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟೇಡಿಯಂ ಹೊಂದಿತ್ತು..
ಮತ್ತೊಂದು ವಿಶೇಷತೆ ಅಂದ್ರೆ ಭಾರತದಲ್ಲಿ ವೆಜ್ ನಾನ್ ವೆಜ್ ಸೀ ಫುಡ್ ಎಲ್ಲದ್ರಲೂ ಭಿನ್ನ ವಿಭಿನ್ನ ಲಕ್ಷಾಂತರ ತರಹೇವಾರಿ ಆಹಾರಗಳು ಸಿಗುತ್ತವೆ… ಚಾಟ್ಸ್ ಇಂದ ಹಿಡಿದು ಪಾನೀಯಗಳು , ಉಪಹಾರದಿಂದ ಹಿಡಿದು ಎಲ್ಲದರಲ್ಲೂ ವೆರೈಟಿಗಳು ಸಿಗುತ್ತವೆ.. ವಿಶ್ವಾದ್ಯಂತ ಪ್ರವಾಸಿಗರು ಭಾರತದಲ್ಲಿ ಇಲ್ಲಿನ ಆಹಾರದ ಸ್ವಾದ ಸವಿಯೋದಕ್ಕೆ ಬರುತ್ತಾರೆ. ವಿಶೇಷ ಅಂದ್ರೆ ಇಡೀ ವಿಶ್ವಕ್ಕೆ ಹೋಲಿಸಿದ್ರೆ ಅತಿ ಹೆಚ್ಚು ಸಸ್ಯಹಾರಿಗಳಿರುವ ದೇಶ ನಮ್ಮ ಭಾರತ..
ಭಾರತ ವಿದ್ಯಾಭ್ಯಾಸಕ್ಕೂ ಸಾಕಷ್ಟು ಒತ್ತು ನೀಡುತ್ತೆ.. ಭಾರತದಲ್ಲಿ ಇಡೀ ವಿಶ್ವದ ದೊಡ್ಡ ಮಾಂಟೆಸ್ಸರಿ ಶಾಲೆಯಿದೆ.. ಇದು ಇರೋದು ಲಕ್ನೋದಲ್ಲಿ.. ಸಿಟಿ ಮಾಂಟೆಸ್ಸರಿ ಸ್ಕೂಲ್.. ಈ ಶಾಲೆ ಗಿನ್ನಿಸ್ ರೆಕಾರ್ಡ್ ಬುಕ್ ನಲ್ಲಿಯೂ ಹೆಸರು ದಾಖಲು ಮಾಡಿಕೊಂಡಿದೆ..
ಇಡೀ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೋಸ್ಟ್ ಆಫೀಸ್ ಇರುವುದೂ ಕೂಡ ನಮ್ಮ ದೇಶದಲ್ಲೇ.. ಭಾರತದ ಜಮ್ಮು ಕಾಶ್ಮೀರದಲ್ಲಿ ನೀರಿನಲ್ಲಿ ತೇಲುವ ಪೋಸ್ಟ್ ಆಫೀಸ್ ಇದೆ..
ಇಡೀ ವಿಶ್ವಕ್ಕೆ 0 ಕೊಟ್ಟಿದ್ದು ಭಾರತವೇ.. ಇಡೀ ವಿಶ್ವದಲ್ಲಿ ಪ್ರಬಲ ದೇಶಗಳಲ್ಲಿ ಇರುವ ಅತ್ಯಾಧುನಿಕ ಶಸ್ತ್ರಾಗಳ ಬಗ್ಗೆ ನಮ್ಮ ಭಾರತದಲ್ಲಿ ಆದಿಕಾಲದಲ್ಲೇ ಆಗ್ಲೇ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಇಡೀ ವಿಶ್ವದಾದ್ಯಂತ ಆಡುತ್ತಿರುವ ಬುದ್ಧಿವಂತಿಯ ಆಟ ಚುದರಂಗ ಅಥವ ಚೆಸ್.. ಇದನ್ನ ವಿಶ್ವಕ್ಕೆ ನೀಡಿದ್ದು ನಮ್ಮ ಹೆಮ್ಮೆಯ ಭಾರತ.. ಹೌದು ಭಾರತದಲ್ಲೇ ಚದುರಂಗವನ್ನ ಆವಿಷ್ಕಾರ ಮಾಡಲಾಗಿತ್ತು.. ಅಷ್ಟೇ ಅಲ್ಲ ಹಾವು ಏಣಿ ಆಟವೂ ಕೂಡ ನಮ್ಮಿಂದಲೇ ವಿಶ್ವಕ್ಕೆ ಕೊಡುಗೆ ಆಗಿ ಸಿಕ್ಕಿದ್ದು.. ವಿಶ್ವದ ಟಾಪ್ 5 ಬಾಹ್ಯಾಕಾಶ ಸಂಸ್ಥೆಗಳಲ್ಲಿ ನಮ್ಮ ಹೆಮ್ಮೆಯ ISRO 5ನೇ ಸ್ಥಾನದಲ್ಲಿದೆ.. ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಯಾನ ಕಳುಹಿಸಿದ ವಿಶ್ವದ ಮೊದಲ ದೇಶವು ನಮ್ಮ ಭಾರತವೇ ಆಗಿದೆ..
ಅಷ್ಟೇ ಅಲ್ಲ ಚಂದ್ರನ ಮೇಲೆ ನೀರು ಪತ್ತೆ ಹಚ್ಚಿದ ಮೊದಲ ದೇಶವೂ ಭಾರತವೇ.. MRP ಯಾವುದೇ ವಸ್ತುಗಳ ದರ ನಿಗದಿತ ಟ್ಯಾಗ್.. ಈ ರೀತಿ MRP ಹೊಂದಿರುವ ಇಡೀ ವಿಶ್ವದ ಏಕಮಾತ್ರ ದೇಶ ಭಾರತ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ವಿಚಾರದಲ್ಲೂ ಭಾರತ 3ನೇ ಸ್ಥಾನದಲ್ಲಿದೆ.
ಇಡೀ ವಿಶ್ವದ ಅತಿ ಉದ್ದವಾದ ಪ್ರತಿಮೆ ಇರುವುದು ನಮ್ಮ ಗುಜರಾತ್ ನಲ್ಲಿ.. ಸ್ಟಾಚ್ಯು ಆಫ್ ಯುನಿಟಿ.. ವಿಶ್ವದ ಅತಿ ದೊಡ್ಡ ಪಕ್ಷಿಯ ಪ್ರತಿಮೆ ಇರುವುದು ಕೂಡ ನಮ್ಮಲ್ಲಿಯೇ..
ವಿಶ್ವದಲ್ಲಿ ಅತಿ ಹೆಚ್ಚು ಮಸಾಲೆ ಪದಾರ್ಥಗಳ ಉತ್ಪಾದನೆಯೂ ನಮ್ಮ ಭಾರತದಲ್ಲೇ ಆಗುತ್ತೆ.. ಪ್ರಪಂಚದಲ್ಲಿ ಅತಿ ಹೆಚ್ಚು ಬಾಳೆ ಹಣ್ಣಿನ ಉತ್ಪಾದನೆಯೂ ನಮ್ಮ ಭಾರತದಲ್ಲಿಯೇ ಆಗುತ್ತದೆ. ಭಾರತ ಟೀ ಗಾಗಿಯೂ ವರ್ಲ್ಡ್ ಫೇಮಸ್.. ಅದ್ರಲ್ಲೂ ನಮ್ಮಲ್ಲಿ ಸಾಕಷ್ಟು ಬಗೆಯ ಟೀಗಳು ಸಿಗುತ್ತವೆ..