Queen Elizabeth II – ರಾಣಿ ಎಲಿಜಬೆತ್ ನಿಧನಕ್ಕೆ ಭಾರತದಲ್ಲಿ ಒಂದು ದಿನ ಶೋಕಾಚರಣೆ..
ರಾಣಿ ಎಲಿಜಬೆತ್ ಅವರ ನಿಧನಕ್ಕಾಗಿ ಭಾರತವು ಸೆಪ್ಟೆಂಬರ್ 11 ರಂದು “ಗೌರವದ ಸಂಕೇತವಾಗಿ” ರಾಜ್ಯ ಶೋಕಾಚರಣೆಯನ್ನ ಘೋಷಿಸಿದೆ. ಇದಲ್ಲದೆ, ತ್ರಿವರ್ಣ ಧ್ವಜವನ್ನು ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ದೇಶದಾದ್ಯಂತ ಅರ್ಧಕ್ಕೆ ಹಾರಿಸಲಾಗುತ್ತದೆ. ಈ ದಿನದಂದು ಸರ್ಕಾರದಿಂದ ಯಾವುದೇ ಅಧಿಕೃತ ಮನರಂಜನೆ ಕಾರ್ಯಕ್ರಮ ಇರುವುದಿಲ್ಲ.
“ಹರ್ ಮೆಜೆಸ್ಟಿ ಕ್ವೀನ್ ಎಲಿಜಬೆತ್ II, ಯುನೈಟೆಡ್ ಕಿಂಗ್‌ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸೆಪ್ಟೆಂಬರ್ 8, 2022 ರಂದು ನಿಧನರಾದರು. ಅಗಲಿದ ಗಣ್ಯರ ಗೌರವಾರ್ಥವಾಗಿ, ಭಾರತ ಸರ್ಕಾರವು ಸೆಪ್ಟೆಂಬರ್ 11 ರಂದು ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬರೋಬ್ಬರಿ 70 ವರ್ಷಗಳ ಕಾಲ ಬ್ರಿಟನ್ ಆಳಿದ್ದ ರಾಣಿ ಎಲಿಜಬೆತ್ II ಗುರುವಾರ ತಮ್ಮ 96 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.








