ನಮೋ ಮೈದಾನದಲ್ಲಿ ಪ್ರಜ್ವಲಿಸಿದ ಸೂರ್ಯ… ವಿವಾದಾತ್ಮಕ ತೀರ್ಪಿಗೆ ಬಲಿಯಾದ ಯಾದವ್…!
india england 4th t-20 – Surya leads India’s charge with fifty
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟ್ಸ್ ಮೆನ್ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದಾರೆ.
ಆಡಿರುವುದು ಎರಡನೇ ಪಂದ್ಯವಾದ್ರೂ ಮೊದಲ ಬಾರಿ ಬ್ಯಾಟಿಂಗ್ ಅವಕಾಶ ಸಿಕ್ಕಿತ್ತು. ಇದನ್ನು ಸರಿಯಾಗಿಯೇ ಬಳಸಿಕೊಂಡ ಸೂರ್ಯಕುಮಾರ್ ಸೂರ್ಯನಂತೆ ನರೇಂದ್ರ ಮೋದಿ ಅಂಗಣದಲ್ಲಿ ಪ್ರಕಾಶಿಸಿದ್ರು.
ಆದ್ರೆ ಸೂರ್ಯಕುಮಾರ್ ಯಾದವ್ ಥರ್ಡ್ ಅಂಪೈರ್ ನ ವಿವಾದಾತ್ಮಕ ತೀರ್ಪಿಗೆ ಬಲಿಯಾಗಬೇಕಾಯ್ತು.
31 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ನೆರವಿನಿಮದ ಆಕರ್ಷಕ 57 ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅವರು ಇಂಗ್ಲೆಂಡ್ ಬೌಲರ್ ಗಳ ಚಳಿ ಬಿಡಿಸಿದ್ರು.
ಆದ್ರೆ ಸ್ಯಾಮ್ ಕುರನ್ ಅವರ ಎಸೆತದಲ್ಲಿ ಡೇವಿಡ್ ಮಲಾನ್ ಕ್ಯಾಚ್ ನೀಡಿದ್ರು. ಆದ್ರೆ ಡೇವಿಡ್ ಮಲಾನ್ ಹಿಡಿದಿರುವ ಕ್ಯಾಚ್ ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿತ್ತು. ಆದ್ರೆ ಥರ್ಡ್ ಅಂಪೈರ್ ಹಲವು ಆಯಾಮಗಳ ಮೂಲಕ ಪರಿಶೀಲಿಸಿ ಕೊನೆಗೆ ಔಟ್ ಎಂದು ತೀರ್ಮಾನ ನೀಡಿದ್ರು.
india england 4th t-20 – Surya leads India’s charge with fifty
ಈ ವೇಳೆ ಥರ್ಡ್ ಅಂಪೈರ್ ತೀರ್ಮಾನದ ವಿರುದ್ಧ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುಪಿತಗೊಂಡಿದ್ದಾರೆ. ಮೇಲ್ನೋಟಕ್ಕೆ ಡೇವಿಡ್ ಮಲಾನ್ ಹಿಡಿದಿರುವ ಕ್ಯಾಚ್ ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದ್ರೆ ಥರ್ಡ್ ಅಂಪೈರ್ ಯಾವ ಆಯಾಮದ ಮೂಲಕ ಔಟ್ ಎಂದು ತೀರ್ಮಾನಿಸಿದ್ರು ಎಂಬುದೇ ಅರ್ಥವಾಗದ ಪ್ರಶ್ನೆಯಾಗಿದೆ.
ಉತ್ತಮ ಲಯದಲ್ಲಿದ್ದ ಸೂರ್ಯ ಕುಮಾರ್ ಯಾದವ್ ನಿರರ್ಗಳವಾಗಿ ಬ್ಯಾಟ್ ಬೀಸುತ್ತಿದ್ದರು. ಆದ್ರೆ 57 ರನ್ ಗಳಿಸಿದ್ದಾಗ ಸೂರ್ಯ ವಿವಾದಾತ್ಮಕ ತೀರ್ಪಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಹಿಂತಿರುಗಿದ್ರು.
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಆದ್ರೆ ಆ ಪಂದ್ಯದಲ್ಲಿ ಸೂರ್ಯ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.
ಹಾಗೇ ಮೂರನೇ ಪಂದ್ಯದಿಂದ ಹೊರಗುಳಿದಿದ್ದ ಸೂರ್ಯ ಕುಮಾರ್ ಯಾದವ್ ನಾಲ್ಕನೇ ಪಂದ್ಯಕ್ಕೆ ಇಶಾನ್ ಕಿಶಾನ್ ಬದಲು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ ಸೂರ್ಯಕುಮಾರ್ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡ್ರು. ಅಲ್ಲದೆ ನಾಯಕ ವಿರಾಟ್ ಕೊಹ್ಲಿಯ ಮೆಚ್ಚುಗೆಗೂ ಪಾತ್ರರಾದ್ರು.
ಕಳೆದ ಐಪಿಎಲ್ ನಲ್ಲಿ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿಯವರನ್ನು ದಿಟ್ಟಿಸಿ ನೋಡಿ ವಿರಾಟ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾದ್ರು.
ಇದೀಗ ಸೂರ್ಯಕುಮಾರ್ ಯಾದವ್ ವಿರಾಟ್ ನಾಯಕತ್ವದಲ್ಲೇ ಆಡಿ ಶಹಬ್ಬಾಸ್ ಗಿರಿಯನ್ನು ಪಡೆದುಕೊಂಡಿದ್ದಾರೆ.
#india england #4tht-20 #Suryakumaryadav #team india #england #rishabpant #viratkohli








