ಬಾಕ್ಸಿಂಡ್ ಡೇ ಟೆಸ್ಟ್ – 131 ರನ್ ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 131 ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಮೊದಲ ಇನಿಂಗ್ಸ್ ನಲ್ಲಿ ರಹಾನೆ ಬಳಗ 326 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ದಾಖಲಿಸಿದ್ರೆ, ನಾಯಕ ಅಜಿಂಕ್ಯಾ ರಹಾನೆ 112 ರನ್ ಗಳಿಸಿದ್ರು.
ಮೂರನೇ ದಿನದ ಆಟ ಆರಂಭಿಸಿದ್ದ ಟೀಮ್ ಇಂಡಿಯಾದ ರಹಾನೆ ಮತ್ತು ರವೀಂದ್ರ ಜಡೇಜಾ ಉತ್ತಮವಾಗಿಯೇ ಆಡುತ್ತಿದ್ದರು.
ಈ ಹಂತದಲ್ಲಿ ಅಜಿಂಕ್ಯಾ ರಹಾನೆ ರನೌಟ್ ಗೆ ಬಲಿಯಾದ್ರು. ನಾಯಕನ ಆಟವನ್ನಾಡಿದ್ದ ರಹಾನೆ 223 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ 112 ರನ್ ಗಳಿಸಿದ್ರು.
ಇನ್ನೊಂದೆಡೆ ರವೀಂದ್ರ ಜಡೇಜಾ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 15ನೇ ಅರ್ಧಶತಕ ಸಿಡಿಸಿದ್ರು. ಜಡೇಜಾ 159 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 57 ರನ್ ಗಳಿಸಿದ್ರು.
ಇನ್ನು ಆರ್. ಅಶ್ವಿನ್ 14 ರನ್ ಗಳಿಸಿದ್ರೆ, ಉಮೇಶ್ ಯಾದವ್ 9 ರನ್ ಗಳಿಸಿದ್ರು. ಜಸ್ಪ್ರಿತ್ ಬೂಮ್ರಾ ಡಕೌಟಾದ್ರು. ಮೊದಲ ಟೆಸ್ಟ್ ಆಡುತ್ತಿರುವ ಮಹಮ್ಮದ್ ಸಿರಾಜ್ ಅಜೇಯರಾಗುಳಿದ್ರೂ ಖಾತೆ ತೆರೆಯಲಿಲ್ಲ.
ಆಸ್ಟ್ರೇಲಿಯಾ ಪರ ಮಿಟ್ಚೆಲ್ ಸ್ಟಾರ್ಕ್ ಮತ್ತು ನಥಾನ್ ಲಿಯಾನ್ ತಲಾ ಮೂರು ವಿಕೆಟ್ ಉರುಳಿಸಿದ್ರು. ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಪಡೆದ್ರೆ, ಜೋಶ್ ಹಾಜ್ಲೆವುಡ್ ಒಂದು ವಿಕೆಟ್ ಪಡೆದ್ರು.