ಭಾರತದ ಅಭಿವೃದ್ಧಿಗೆ ಪ್ರಣಬ್ ಮುಖರ್ಜಿ ಕೊಡುಗೆ ಅನನ್ಯ – ಪ್ರಧಾನಿ ಮೋದಿ ಸಂತಾಪ
ಮಾಜಿ ರಾಷ್ಟ್ರಪತಿಗಳ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಭಾರತ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಭಾರತ ದುಃಖಿಸುತ್ತಿದೆ. ಅವರು ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಸೃಷ್ಟಿಸಿದ್ದಾರೆ. ವಿದ್ವಾಂಸರ ಶ್ರೇಷ್ಠತೆ, ಅತ್ಯುನ್ನತ ರಾಜಕಾರಣಿ, ಉನ್ನತ ವ್ಯಕ್ತಿತ್ವವುಳ್ಳವರಾದ ಅವರನ್ನು ಸಮಾಜದ ಎಲ್ಲಾ ವರ್ಗದ ಜನರು ಗೌರವದಿಂದ ಕಾಣುತ್ತಿದ್ದರು.
ಭಾರತದ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದ ಪ್ರವೇಶವನ್ನು ಸಾಮಾನ್ಯ ನಾಗರಿಕರಿಗೆ ಇನ್ನಷ್ಟು ಸುಗಮಗೊಳಿಸಿದರು. ಅವರು ರಾಷ್ಟ್ರಪತಿ ಭವನವನ್ನು ಕಲಿಕೆ, ನಾವೀನ್ಯತೆ, ಸಂಸ್ಕೃತಿ, ವಿಜ್ಞಾನ ಮತ್ತು ಸಾಹಿತ್ಯದ ಕೇಂದ್ರವನ್ನಾಗಿ ಮಾಡಿದರು. ಪ್ರಮುಖ ನೀತಿ ವಿಷಯಗಳ ಬಗ್ಗೆ ಅವರ ಬುದ್ಧಿವಂತ ಸಲಹೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
https://twitter.com/narendramodi/status/1300412575641862144
ನಾನು 2014 ರಲ್ಲಿ ದೆಹಲಿಗೆ ಹೊಸಬನಾಗಿದ್ದೆ. ಮೊದಲನೇ ದಿನದಿಂದ, ಶ್ರೀ ಪ್ರಣಬ್ ಮುಖರ್ಜಿ ಅವರು ಮಾರ್ಗದರ್ಶನ, ಬೆಂಬಲ ನೀಡಿ ಆಶೀರ್ವದಿಸಿದರು . ಅವರೊಂದಿಗಿನ ನನ್ನ ಸಂವಾದವನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಭಾರತದಾದ್ಯಂತ ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ನನ್ನ ಸಾಂತ್ವನಗಳು ಓಂ ಶಾಂತಿ, ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಪಕ್ಷಾತೀತರಾಗಿ ನಾಯಕರು ಮತ್ತು ಅವರ ಅಭಿಮಾನಿಗಳು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.








