ದೇಶದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದೆ. ಕ್ಷಣದಿಂದ ಕ್ಷಣಕ್ಕೆ ಕಿಲ್ಲರ್ ಕೊರೊನಾ ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಪಿ.ಎಂ ನರೇಂದ್ರ ಮೋದಿ ಮತ್ತೊಮ್ಮೆ ಮಾತನಾಡಿದ್ದಾರೆ. ಇಂದು ರಾತ್ರಿ ಎಂಟು ಗಂಟಗೆ ಮಾತನಾಡಿದ ಅವರು, ಮಾರ್ಚ್ 22 ರಂದು ದೇಶದ ಉದ್ದಗಲಕ್ಕೂ ಜನತಾ ಕರ್ಪ್ಯೂ ಆಚರಿಸಲಾಗಿದೆ. ಇದರಲ್ಲಿ ದೇಶದ ಎಲ್ಲಾ ಜನ ಭಾಗಿಯಾಗಿದ್ದರು. ನಾವೆಲ್ಲರೂ ಒಗ್ಗಟಿನಿಂದ ಕೊರೊನಾ ಮಹಾಮಾರಿ ವಿರುದ್ದ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳಿಗೆ ಕೊರೊನಾ ಸಂಕಷ್ಟ ತಂದಿದೆ. ಎಲ್ಲರೂ ಎಷ್ಟೇ ಪ್ರಯತ್ನ ಪಟ್ಟರು ಕೊರೊನಾ ಹೆಚ್ಚುತ್ತಲೇ ಇದೆ. ಹಾಗಾಗಿ ಕೊರೊನಾ ಹರಡುವಿಕೆ ತಡೆಬೇಕಾದರೆ ಇರುವುದೇ ಒಂದೇ ಒಂದು ಮಾರ್ಗ ಎಂದರೇ ಅದು ಸಾಮಾಜಿಕ ಅಂತರ ಮಾತ್ರ. ಹಾಗಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ರಾಜ್ಯ ಸರ್ಕಾರಗಳಿಂದ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೂ ಸಹ ಹರಡುವಿಕೆ ಕಡಿಮೆ ಆಗಿಲ್ಲ. ಹಾಗಾಗಿ ಇಂದು ರಾತ್ರಿ 12 ಗಂಟೆಯಿಂದ ಭಾರತ ಸಂಪೂರ್ಣ ಲಾಕ್ ಡೌನ್ ಆಗುತ್ತದೆ. ಇದು ಒಂದು ರೀತಿ ಕರ್ಫ್ಯೂ ಎಂದು ಭಾವಿಸಿ. ಜನತಾ ಕರ್ಫ್ಯೂಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ಲಾಕ್ ಡೌನ್ ಮಾಡಲಾಗುತ್ತಿದೆ. ಹಾಗಾಗಿ ಜನ ಮನೆಯಿಂದ ಹೊರ ಬರಬೇಡಿ. ಯಾರು ಎಲ್ಲಿ ಇದ್ದೀರೋ ಅಲ್ಲೇ ಇರಿ. ಹೊರ ಬರಬೇಡಿ. 21 ಒಂದು ದಿನ ನೀವು ಮನೆಯಲ್ಲಿ ಇರಲಿಲ್ಲ ಎಂದರೇ ನಿಮ್ಮ ಕುಟುಂಬ 21 ವರ್ಷ ಹಿಂದೇ ಹೋಗುತ್ತದೆ. ನಾನು ಪ್ರಧಾನಿ ಮಂತ್ರಿಯಾಗಿ ಈ ಮಾತು ಹೇಳುತ್ತಿಲ್ಲ ನಿಮ್ಮ ಮನೆಯ ಸದಸ್ಯನಾಗಿ ಹೇಳುತ್ತಿದ್ದೇನೆ. ನಿಮಗೆ ನೀವೆ ಲಕ್ಷ್ಮಣ ರೇಖೆ ಹಾಕಿಕೊಳ್ಳಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ
2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...








