ಭಾರತೀಯ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ನಡೆಯುತ್ತಿರುವ ಟಿ20 ಎರಡನೇ ತಂಡದಲ್ಲಿ ಆತಿಥೇಯ ತಂಡ ಸೋಲು ಕಂಡಿದೆ.
ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಆಸ್ಟ್ರೇಲಿಯಾ ತಂಡ ಎರಡನೇ ಪಂದ್ಯದಲ್ಲಿ 6 ವಿಕೆಟ್ ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 130 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 4 ವಿಕೆಟ್ ಕಳೆದುಕೊಂಡು 19ನೇ ಓವರ್ ಗೆ ಗೆದ್ದು ಬೀಗಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿಕೊಂಡಿದೆ.
ಭಾರತದ ಪರ ಯಾವೊಬ್ಬ ಉಟಾಗರರು ಉತ್ತಮ ಪ್ರದರ್ಶನ ತೋರಿಸಲಿಲ್ಲ. ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಬೇಗನೆ ಪೆವಿಲಿಯನ್ ಸೇರಿಕೊಂಡರು. ಶಫಾಲಿ ವರ್ಮಾ 1 ರನ್, ಸ್ಮೃತಿ ಮಂಧಾನ 23 ರನ್, ಜೆಮಿಮಾ ರಾಡ್ರಿಗಸ್ 13 ರನ್, ದೀಪ್ತಿ ಶರ್ಮಾ 30 ರನ್, ರಿಚಾ ಘೋಷ್ 23, ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ 6 ರನ್ ಗಳಿಸಿದರು. ಭಾರತ ನೀಡಿದ 130 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲಿ ಉತ್ತಮ ರನ್ ಕೂಡಿ ಬಂದವು. ಆನಂತರ ಭಾರತೀಯ ಬೌಲರ್ ಗಳು ಗೆಲುವಿಗಾಗಿ ಸೆಣಸಾಟ ನಡೆಸಿದರು.
ಪೂಜಾ ವಸ್ತ್ರಾಕರ್ ಆಸೀಸ್ ಗೆಲುವಿಗೆ ಬ್ರೇಕ್ ಹಾಕಲು ಯತ್ನಿಸಿದರು. ಕೊನೆಯಲ್ಲಿ ಸೋಲು ಕಂಡಿತು.








