ಪಾಕ್ ಗೆ ತಿರುಗೇಟು ನೀಡಲು ಭಾರತ ಸಕಲ ಸಿದ್ಧತೆ ಮಾಡಿಕೊಂಡಿದೆ : ಅಮೆರಿಕ – Saaksha Tv
ವಾಷಿಂಗ್ಟನ್: ಭಾರತದ ವಿರುದ್ಧ ಪಾಕ್ ಪ್ರಚೋದನಾ ಕಾರ್ಯ ಮಾಡಿದರೆ ಅದಕ್ಕೆ ಸರಿಯಾಗಿ ತಿರುಗೇಟು ನೀಡಲು ಭಾರತ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಅಮೆರಿಕ ರಾಷ್ಟ್ರೀಯ ಗುಪ್ತಚರ ನಿದೇರ್ಶಕರ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ವರದಿ ಪ್ರಕಾರ ಪಾಕಿಸ್ತಾನ ಭಾರತವನ್ನು ವಿರೋಧಿಸುವ ಉಗ್ರರಿಗೆ ಮೊದಲಿನಿಂದಲೂ ಆಶ್ರಯ ಕೊಡುತ್ತಿದೆ. ಹಿಂದಿನ ಸರ್ಕಾರಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಕ್ ವಿರುದ್ಧ ಸೇನಾಬಲವನ್ನು ಬಳಸಿಕೊಂಡು ತಿರುಗೇಟು ಕೊಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ವಿಸೇನಾ ಜಟಾಪಟಿಯಲ್ಲಿ ಕಾಶ್ಮೀರ ಹಿಂಸಾತ್ಮಾಕ ಅಶಾಂತಿ ಉಂಟಾಗುವ ಸಾಧ್ಯತೆಯಿದೆ. ಈ ತಿರುಗೇಟು ಪಾಕ್‍ಗೆ ದೊಡ್ಡ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವರದಿ ಹೇಳಿದೆ.
ವಿವಾದಿತ ಗಡಿಯಲ್ಲಿ ಭಾರತ ಹಾಗೂ ಚೀನಾ ಸೇನೆಗಳು ನಿಲುವು ಎರಡೂ ಪರಮಾಣು ಶಕ್ತಿಯುಳ್ಳ ದೇಶಗಳ ನಡುವೆ ಸಶಸ್ತ್ರಮುಖಾಮುಖಿಯ ಅಪಾಯವನ್ನು ಹೆಚ್ಚಿಸಲಿದೆ ಎಂದು ವರದಿ ತಿಳಿಸಿದೆ.









