ಬೆಂಗಳೂರು: ಭಾರತ (Team India) ಹಾಗೂ ನ್ಯೂಜಿಲೆಂಡ್ (New Zealand ) ಮಧ್ಯೆ ನಡೆಯುತ್ತಿರುವ ಟೆಸ್ಟ್ ಪಂದ್ಯ ರೋಚಕ ಹಂತಕ್ಕೆ ಬಂದು ನಿಂತಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಹೀನಾಯ ಸ್ಥಿತಿ ಕಂಡಿದ್ದ ಭಾರತ ಈಗ ಮೈಗೊಡವಿ ಎದ್ದು ನಿಂತಿದೆ. ಪಂದ್ಯದ ಮೂರನೇ ದಿನದ ಎರಡನೇ ಸೆಷನ್ ನಲ್ಲಿ ಕಿವೀಸ್ ತಂಡವನ್ನು 91.3 ಓವರ್ಗಳಲ್ಲಿ 402 ರನ್ ಗಳಿಗೆ ಆಲೌಟ್ ಮಾಡಿ, ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ಪ್ರದರ್ಶಿಸುತ್ತಿದೆ.
ಪರಿಣಾಮ ಮೂರನೇ ದಿನದ ಅಂತ್ಯಕ್ಕೆ 49 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 231 ರನ್ ಗಳನ್ನು ಗಳಿಸಿತು. ಆದರೂ ಮೊದಲ ಇನ್ನಿಂಗ್ಸ್ ಹಿನ್ನಡೆ ತಪ್ಪಿಸಲು ಭಾರತಕ್ಕೆ ಇನ್ನೂ 125 ರನ್ ಗಳ ಅಗತ್ಯವಿದೆ.
ಭಾರತ ಪರ, ಯಶಸ್ವಿ ಜೈಸ್ವಾಲ್ 52 ಎಸೆತಗಳಲ್ಲಿ 35 ರನ್, ನಾಯಕ ರೋಹಿತ್ ಶರ್ಮಾ 63 ಎಸೆತಗಳಲ್ಲಿ 52 ರನ್, ಕೊಹ್ಲಿ 102 ಎಸೆತಗಳಲ್ಲಿ 70 ರನ್ ಗಳಿಸಿ ಔಟ್ ಆಗಿದ್ದಾರೆ. ಸರ್ಫರಾಜ್ 78 ಎಸೆತಗಳಲ್ಲಿ 70 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.