ಸೌತಂಪ್ಟನ್ ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್ ಪಂದ್ಯ – ಸೌರವ್ ಗಂಗೂಲಿ ಸ್ಪಷ್ಟನೆ
ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್ ಪಂದ್ಯದ ಸೌತಂಪ್ಟನ್ ನಲ್ಲಿ ನಡೆಯಲಿದೆ. ಈ ಹಿಂದೆ ಕ್ರಿಕೆಟ್ ಕಾಶಿ ಲಾಡ್ರ್ಸ್ ನಲ್ಲಿ ನಿಗದಿಯಾಗಿತ್ತು. ಆದ್ರೆ ಇದೀಗ ಫೈನಲ್ ಪಂದ್ಯದ ತಾಣವನ್ನು ಬದಲಾವಣೆ ಮಾಡಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಸೌತಂಪ್ಟನ್ ನ ಏಜಸ್ ಬೌಲ್ ಕ್ರೀಡಾಂಗಣದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ ನಡೆಯಲಿದೆ. ಅಲ್ಲಿ ಫೈ ಸ್ಟಾರ್ ಸೌಲಭ್ಯಗಳಿವೆ. ಅಲ್ಲದೆ ಉಭಯ ತಂಡಗಳಿಗೆ ಜೈವಿಕ ಸುರಕ್ಷತೆಯ ಹೆಚ್ಚಿನ ಸೌಲಭ್ಯ ಸಿಗಲಿದೆ. ಇದು ಐಸಿಸಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೂ ಸಹಾಯವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಫೈನಲ್ ಪಂದ್ಯ ಜೂನ್ 18ರಿಂದ 22ರವರೆಗೆ ನಡೆಯಲಿದೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ.
ಇನ್ನು ಸೌರವ್ ಗಂಗೂಲಿ ಅವರು ಇತ್ತೀಚೆಗೆ ಭಾರತ ತಂಡದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವಿನ ಬಗ್ಗೆ ಮುಕ್ತಕಂಠದಿಂದ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಮತ್ತು ಟೀಮ್ ಇಂಡಿಯಾ ಆಟಗಾರರನ್ನು ಶ್ಲಾಘನೆ ಮಾಡಿದ್ರು.
ಆಸ್ಟ್ರೇಲಿಯಾ ಸರಣಿಯಲ್ಲಿ ಅಜಿಂಕ್ಯಾ ರಹಾನೆ ನಾಯಕತ್ವ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ಕೂಡ ಗುಣಗಾನ ಮಾಡಿದ್ರು. ಆಟಗಾರರು ಕಳೆದ ಐಪಿಎಲ್ ನಂತರ ನಿರಂತರವಾಗಿ ಜೈವಿಕ ಸುರಕ್ಷತೆಯಡಿಯಲ್ಲಿ ಆಡುತ್ತಿದ್ದಾರೆ. ಜೈವಿಕ ಸುರಕ್ಷತೆಯಡಿಯಲ್ಲಿ ಆಡುವುದು ಸುಲಭದ ಸಂಗತಿಯಲ್ಲ ಎಂದು ಗಂಗೂಲಿ ಹೇಳಿದ್ರು.
ಇನ್ನು ಸತತ ಎರಡು ಸರಣಿ ಗೆಲುವಿನ ಬಗ್ಗೆ ಮಾತನಾಡಿದ ಗಂಗೂಲಿ, ತಂಡದ ಯಶಸ್ಸಿನ ಹಿಂದೆ ಹೆಡ್ ಕೋಚ್, ಟೀಮ್ ಮ್ಯಾನೇಜ್ ಮೆಂಟ್ ಎಲ್ಲರ ಪರಿಶ್ರಮವಿದೆ. ಅದರ ಜೊತೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ರಾಹುಲ್ ದ್ರಾವಿಡ್ ಅವರ ಶ್ರಮವೂ ಇದೆ. ತಂಡದ ಯಶಸ್ಸಿನಲ್ಲಿ ದ್ರಾವಿಡ್ ಪಾಲು ಕೂಡ ಇದೆ, ತಂಡದ ಬೆಂಚ್ ಸ್ಟ್ರೇಂತ್ ಬಲಿಷ್ಠಗೊಳಿಸಿರುವುದರ ಹಿಂದೆ ರಾಹುಲ್ ದ್ರಾವಿಡ್ ಅವರ ಶ್ರಮವಿದೆ ಎಂದು ಹೇಳಿದ್ರು.
ಹಾಗೇ ಮ್ಯಾಚ್ ವಿನ್ನರ್ ರಿಷಬ್ ಪಂತ್ ಬಗ್ಗೆಯೂ ಸೌರವ್ ಗಂಗೂಲಿ ಗುಣಗಾನ ಮಾಡಿದ್ರು. ರಿಷಬ್ ಪಂತ್ ನನ್ನು ನಾನು ಕಳೆದ ಎರಡು ವರ್ಷಗಳಿಂದ ನೋಡುತ್ತಿದ್ದೇನೆ. ಅದ್ಭುತ ಪ್ರತಿಭೆ ಹಾಗೂ ಸಾಮಥ್ರ್ಯ ವಿರುವ ಆಟಗಾರ. ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬದಲಾಯಿಸುವಂತಹ ಸಾಮಥ್ರ್ಯ ಆತನಲ್ಲಿದೆ. ಸೆಹ್ವಾಗ್, ಯುವರಾಜ್, ಧೋನಿಯ ರೀತಿಯಲ್ಲೇ ಪಂದ್ಯದ ಸ್ಥಿತಿಯನ್ನು ಬದಲಾಯಿಸುವ ಕಲೆ ಆತನಲ್ಲಿದೆ ಎಂದು ಗಂಗೂಲಿ ಅಭಿಪ್ರಾಯಪಟ್ರು.