ಭಾರತವನ್ನು ಗೆಲ್ಲೋಕೆ ಬಿಡಲ್ಲ ಎಂದ ಪಾಕಿಸ್ತಾನ ಬೌಲರ್ ಹಸನ್ ಅಲಿ – “ ಓ ಭ್ರಮೇ.. ” ಅಂತಿದ್ದಾರೆ ಭಾರತೀಯರು..!
ಅಕ್ಟೋಬರ್ 24 ರಂದು ದುಬೈನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಆರಂಭಿಕ ಆಟದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಹಾಗೂ ಭಾರತ ಕಾದಾಡಲಿದೆ. ಈ ಪಂದ್ಯ ಚಾಂಪಿಯನ್ಸ್ ಟ್ರೋಫಿ 2017 ಫೈನಲ್ ಅನ್ನು ಪುನರಾವರ್ತಿಸುತ್ತದೆ. ಭಾರತವನ್ನ ಈ ಬಾರಿ ಗೆಲ್ಲಲು ಬಿಡೋದಿಲ್ಲ ಎಂದು ವೇಗದ ಬೌಲರ್ ಹಸನ್ ಅಲಿ ಹೇಳಿದ್ದಾರೆ.
ಪಾಕಿಸ್ತಾನವು 2017 ರಲ್ಲಿ ಲಂಡನ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಭಾರತವನ್ನ ಸೋಲಿಸಿತ್ತು. ಪಾಕಿಸ್ತಾನವು 2018 ರಲ್ಲಿ ಏಷ್ಯಾಕಪ್ ಮತ್ತು 2019 ರಲ್ಲಿ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಸೋತಿದೆ. ಆದ್ರೆ ಈ ಬಾರಿ 2017 ಪುನಾವರ್ತಿಸಲಿದೆ. ಪಾಕಿಸ್ತಾನವು ಭಾರತದ ವಿರುದ್ಧ ಗೆದ್ದು ಬೀಗಲಿದೆ ಎಂದು ಓವರ್ ಕಾನ್ಫಿಡೆಂಟ್ ಆಗಿ ಮಾತನಾಡಿದ್ದಾರೆ. ಅಲ್ಲದೇ ಬಾರತೀಯ ಕ್ರಿಕೆಟ್ ಪ್ರಿಇಯರಿಂದ ಟ್ರೋಲ್ ಆಗ್ತಾಯಿದ್ದಾರೆ. ಹಸನ್ ಅಲಿ ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯಗಳು ಯಾವಾಗಲೂ ಆಟಗಾರರ ಮೇಲೆ ಹೆಚ್ಚುವರಿ ಒತ್ತಡವನ್ನು ತರುತ್ತವೆ ಆದರೆ ಪಾಕಿಸ್ತಾನವು ತಮ್ಮ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದೆ ಎಂದು ಹೇಳಿಕೊಂಡಿದ್ದಾರೆ.
ನಾವು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಾಗ (2017 ರಲ್ಲಿ) ಇದು ನಮಗೆ ಬಹಳ ಒಳ್ಳೆಯ ಸಮಯವಾಗಿತ್ತು ಮತ್ತು ಟಿ 20 ವಿಶ್ವಕಪ್ನಲ್ಲಿ ನಾವು ಅವರನ್ನು ಮತ್ತೊಮ್ಮೆ ಸೋಲಿಸಲು ಪ್ರಯತ್ನಿಸುತ್ತೇವೆ. ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡ್ತೇವೆ. ಭಾರತದ ವಿರುದ್ಧ ಆಡುವುದು ಯಾವಾಗಲೂ ಒತ್ತಡದ ಆಟವಾಗಿದೆ ಎರಡೂ ದೇಶಗಳ ಅಭಿಮಾನಿಗಳ ನಿರೀಕ್ಷೆಗಳು ತುಂಬಾ ಹೆಚ್ಚಾಗಿರುತ್ತದೆ ಎಂದಿದ್ದಾರೆ ಹಸನ್ ಅಲಿ.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ “ಬಾಯ್ಕಟ್ ಶಾರುಖ್”








