ಯುದ್ಧ ಮಧ್ಯೆಯು ರಷ್ಯಾದಿಂದ ಯುದ್ಧ ಸಾಮಾಗ್ರಿಗಳನ್ನು ಖರೀದಿಸಿದ ಭಾರತ
ನವದೆಹಲಿ : ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ಪ್ರಾರಂಭಾವಗಿ 53 ದಿನಗಳು ಕಳೆದಿವೆ. ಯುದ್ಧದ ಮಧ್ಯೆ ಭಾರತ ರಷ್ಯಾದಿಂದ ಎಸ್- 400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಸಿಮ್ಯುಲೇಟರ್‌ಗಳು ಮತ್ತು ಇತರ ಉಪಕರಣಗಳನ್ನು ಖರೀದಿಸಿದೆ.
ಯುದ್ಧ ನಡಯುತ್ತಿರುವ ಮಧ್ಯೆಯೇ ಭಾರತ ರಷ್ಯಾದಿಂದ ಪೆಟ್ರೋಲ್, ಡಿಸೇಲ್, ವಿಮಾನಗಳ ಎಂಜಿನ್ ಮತ್ತು ಬಿಡಿಭಾಗಗಳನ್ನು ಖರೀದಿಸಿದ್ದು, ಇದೀಗ ಸಿಮ್ಯುಲೇಟರ್ಗಳನ್ನು ಖರೀದಿಸಿದೆ. ಇದರಲ್ಲಿ ಸ್ಕ್ವಾಡ್ರನ್ ಮತ್ತು ಸಿಮ್ಯುಲೇಟರ್‌ಗಳು ಹಾಗೂ ತರಬೇತಿ ಸಂಬಂಧಿತ ಉಪಕರಣಗಳು ಮಾತ್ರ ಇವೆ. ಕ್ಷಿಪಣಿಗಳು ಅಥವಾ ಲಾಂಚರ್‌ಗಳನ್ನು ಒಳಗೊಂಡಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಅಲ್ಲದೇ ಈ ಖರಿದಿಗೆ ಯಾವ ರೀತಿಯಾಗಿ ಹಣ ಸಂದಾಯ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಭಾರತೀಯ ರಕ್ಷಣಾ ಪಡೆಗಳು ಇತ್ತೀಚೆಗೆ ರಷ್ಯನ್ನರಿಂದ ಯುದ್ಧ ಸಾಮಗ್ರಿಗಳನ್ನು ಪಡೆದುಕೊಂಡಿದೆ. ದೇಶಕ್ಕೆ ಅವುಗಳನ್ನು ರಷ್ಯಾ ಸಾಗಿಸುತ್ತಿದೆ. ನಮ್ಮ ಪಡೆಗಳಿಗೆ ಯುದ್ಧ ಸಾಮಗ್ರಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಣಕಾಸು ನಿರ್ಬಂಧ ವಿಧಿಸಿದ ಪರಿಣಾಮ ಯಾವ ಮಾದರಿಯಲ್ಲಿ ರಷ್ಯಾಗೆ ಹಣ ಪಾವತಿ ಮಾಡಬೇಕು ಎಂಬ ಬಗ್ಗೆ ಚಿಂತನೆ ಮುಂದುವರಿದಿದೆ. ಇದನ್ನು ಬಗೆಹರಿಸಲು ಉಭಯ ರಾಷ್ಟ್ರಗಳ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ಬೇರೆ ಆಯ್ಕೆಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ತಿಳಿಸಿವೆ.









