ಹೊಸದಿಲ್ಲಿ, ಜೂನ್ 7 : ಭಾರತದಲ್ಲಿ ಕೊರೋನಾ ವೈರಸ್ ನ ಅಟ್ಟಹಾಸ ಮಿತಿಮೀರಿದ್ದು, ವಿಶ್ವದ ಅತಿ ಹೆಚ್ಚು ಸೋಂಕು ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನಕ್ಕೇರಿದೆ.
ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಹೆಚ್ಚುತ್ತಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 2.50 ಲಕ್ಷ ಗಡಿಯತ್ತ ಮುನ್ನುಗುತ್ತಿದೆ.
ಭಾರತದಲ್ಲಿ ಇಲ್ಲಿಯವರೆಗೆ 2,46,549 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಶನಿವಾರ ಸ್ಪೇನ್ನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿಹೆಚ್ಚು ಕೊರೊನಾ ಪೀಡಿತ ರಾಷ್ಟ್ರ ಸ್ಥಾನಕ್ಕೆ ಏರಿದೆ. ಒಂದೇ ದಿನದಲ್ಲಿ 10,000 ಹೊಸ ಕೊರೊನಾ ಪ್ರಕರಣಗಳು ಮೊದಲ ಬಾರಿಗೆ ದೇಶದಲ್ಲಿ ಪತ್ತೆಯಾಗಿದ್ದರೆ, 297 ಸಾವುಗಳು ವರದಿಯಾಗಿವೆ.
ಇಲ್ಲಿಯವರೆಗೆ ಅಮೆರಿಕದಲ್ಲಿ 19,06,060 ಪ್ರಕರಣಗಳು, ಬ್ರೆಜಿಲ್ ನಲ್ಲಿ 6,14,941, ರಷ್ಯಾದಲ್ಲಿ 4,58,102 ಪ್ರಕರಣ ಮತ್ತು ಯುಕೆಯಲ್ಲಿ 2,86,294 ಪ್ರಕರಣಗಳು ಪತ್ತೆಯಾಗಿದೆ.
ದಿನ ಭವಿಷ್ಯ (30-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
ದಿನ ಭವಿಷ್ಯ: 30-03-2026 1. ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹದ ದಿನವಾಗಿದೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ಚುರುಕುತನ ಇರುತ್ತದೆ. ಉದ್ಯೋಗ ಮತ್ತು ಹಣಕಾಸು: ಕಚೇರಿಯಲ್ಲಿ...








