ಕೊರೊನಾ ಸಂಕಷ್ಟದಲ್ಲಿ ವಿಶ್ವಸಂಸ್ಥೆಯ ನೆರವಿನ ಅಗತ್ಯವಿಲ್ಲ ಎಂದ ಭಾರತಕ್ಕೆ ಬುದ್ಧಿ ಹೇಳಿದ ಗುಟರೆಸ್..!
ನವದೆಹಲಿ: ಇಡೀ ಭಾರತವೇ ಮಹಾಮಾರಿ ಕೊರೊನಾ ಆತಂಕದಲ್ಲಿದೆ. ಬೆಡ್ ಕೊರತೆ ಆಕ್ಸಿಜನ್ ಕೊರತೆಯಿಂದ ರೋಗಿಗಳು ಪರಾದಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ವಿಶ್ವಸಂಸ್ಥೆಯು ಭಾರತಕ್ಕೆ ನೆರವು ನೀಡುವುದಾಗಿ ಘೋಷಣೆ ಮಾಡಿದೆ. ಆದ್ರೆ ವಿಶ್ವಸಂಸ್ಥೆಯ ಪ್ರಸ್ತಾಪವನ್ನು ಭಾರತ ಸರ್ಕಾರ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ವಿಶ್ವಸ್ಥೆಯ ಏಜೆನ್ಸಿಗಳ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ಹೇಳಿದ್ದೆವು ಆದರೆ, ಭಾರತ ತನಗೆ ಬೇಕಿರುವ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆಯನ್ನು ಹೊಂದಿರುವುದಾಗಿ ಹೇಳಿದೆ ಎಂದು WHO ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗಟರೆಸ್ ಹೇಳಿದ್ದಾರೆ.
ನಾವು ಭಾರತಕ್ಕೆ ಸಹಾಯ ಮಾಡಲು ಈಗಲೂ ಸಿದ್ಧವಿದ್ದು, ಅಗತ್ಯ ವಸ್ತುಗಳ ಪಟ್ಟಿಯನ್ನು ಕಳಿಸಿಕೊಟ್ಟರೆ ಅದನ್ನು ಪೂರೈಸಲಾಗುವುದು. ಭಾರತಕ್ಕೆ ಈ ಕುರಿತು ಮರಳಿ ಮನವರಿಕೆ ಮಾಡಿಕೊಡಲಾಗಿದೆಯಾದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.