ದೇಶದಲ್ಲಿ ದಾಖಲೆ ಮಟ್ಟದ ಕೊರೊನಾ ಕೇಸ್ ಪತ್ತೆ : ಲಾಕ್ ಡೌನ್ ಅನಿವಾರ್ಯವೇ..?
ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆಯ ಸುನಾಮಿ ಯಾವುದೇ ಲಂಗುಲಗಾಮಿಲ್ಲದೇ ಮುನ್ನಗ್ಗುತ್ತಿದೆ. ಕೊರೊನಾ ಮೊದಲ ಅಲೆಗಿಂತಲೂ ಕೊರೊನಾ ಎರಡನೇ ಅಲೆ ತೀವ್ರಸ್ವರೂಪದಲ್ಲಿ ಜನರ ದೇಹ ಹೊಕ್ಕುತ್ತಿದೆ.
ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1,68,912 ಸೋಂಕಿತರು ಪತ್ತೆಯಾಗಿದ್ದಾರೆ. ಹಲವು ತಿಂಗಳ ಬಳಿಕ 904 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1,68,912 ಮಂದಿಗೆ ಕೊರೊನಾ ಸೋಂಕು ತಗುಲಿದ್ದರೇ 904 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.
ಇದರೊಂದಿಗೆ ದೇಶದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆ 1,35,27,717 ಹಾಗೂ ಮೃತರ ಸಂಖ್ಯೆ 1,70,179ಕ್ಕೆ ಏರಿಕೆಯಾಗಿದೆ.
ನಿನ್ನೆ 75,086 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 1,21,56,529 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿನ್ನೂ 12,01,009 ಆಕ್ಟೀವ್ ಕೇಸ್ ಗಳಿವೆ.
ಇನ್ನು ದಿನದಿಂದ ದಿನಕ್ಕೆ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿರೋದು ದೇಶದಲ್ಲಿ ಮತ್ತೆ ಲಾಕ್ ಡೌನ್ ಅನಿವಾರ್ಯವೇ ಪ್ರಶ್ನೆಗೆ ಕಾರಣವಾಗಿದೆ.
ದೇಶದ ಕೆಲ ನಗರಗಳಲ್ಲಿ ಈಗಾಗಲೇ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಆದರೂ ಕೊರೊನಾ ರಣಕೇಕೆ ಮುಂದುವರೆದಿದ್ದು, ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೋ ಕಾದುನೋಡಬೇಕಾಗಿದೆ.










