Covid Update – ಕಳೆದ 24 ಗಂಟೆಗಳಲ್ಲಿ 12,608 ಕೋವಿಡ್ ಪ್ರಕರಣ ಪತ್ತೆ…
ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ನವೀಕರಿಸಿದ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 12,608 ಹೊಸ ಕರೋನವೈರಸ್ ಸೋಂಕುಗಳು ಪತ್ತೆಯಾಗಿವೆ. ಸಾಂಕ್ರಮಿಕತೆ ಶುರುವಾದಾಗಿನಿಂದ ಇಲ್ಲಿಯವರೆಗೆ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 4,42,98,864 ಕ್ಕೆ ತಲುಪಿದೆ, ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,01,343 ಕ್ಕೆ ಇಳಿದಿದೆ.
ಕೇರಳದಲ್ಲಿ 29 ಸಾವುಗಳು ಸೇರಿದಂತೆ ದೇಶಾದ್ಯಂತ 72 ಸಾವುಗಳು ನಿನ್ನೆ ಕರೋನಾದಿಂದ ಸಂಭವಿಸಿದೆ. ಇನ್ನುಳಿದ 43 ಹೊಸ ಸಾವುಗಳು ದೆಹಲಿಯಿಂದ ಎಂಟು, ಮಹಾರಾಷ್ಟ್ರದಿಂದ ಆರು, ಹರಿಯಾಣದಿಂದ ಐದು, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ ನಾಲ್ಕು, ಕರ್ನಾಟಕದಿಂದ ಮೂರು, ಛತ್ತೀಸ್‌ಗಢ, ಗುಜರಾತ್, ಒಡಿಶಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ತಲಾ ಇಬ್ಬರು ಮತ್ತು ಚಂಡೀಗಢದಿಂ ಮಧ್ಯಪ್ರದೇಶ ಮತ್ತು ಉತ್ತರಾಖಂಡದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ದೇಶಾದ್ಯಂತ ಒಟ್ಟು ಕೋವಿಡ್ ಸಾವಿನ ಸಂಖ್ಯೆ 5,27,206 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಅಂಕಿ ಅಂಶಗಳಲ್ಲಿ ತಿಳಿದುಬಂದಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ 3,715 ರಷ್ಟು ಇಳಿಕೆಯಾಗಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,36,70,315ಕ್ಕೆ ಏರಿದೆ. ಇಲ್ಲಿಯವರೆಗಿನ ಒಟ್ಟಾರೆ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ರಾಷ್ಟ್ರವ್ಯಾಪಿ ಕೋವಿಡ್ -19 ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 208.95 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.