‘ದಕ್ಷಿಣ ಏಷ್ಯಾ ಅದ್ರಲ್ಲೂ ಭಾರತದಲ್ಲಿ ಅತ್ಯಾಚಾರ ಸಂತ್ರಸ್ತರಿಗೆ ಸರಿಯಾಗಿ ನ್ಯಾಯ ಸಿಗುತ್ತಿಲ್ಲ – ಕಠಿಣ ಕಾನೂನಿನ ಅಗತ್ಯವಿದೆ’…!
ದಕ್ಷಿಣ ಏಷ್ಯಾ ಭಾಗದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತಾದ ಅಧಿಕೃತ ವರದಿ ಅಥವ ರಿಪೋರ್ಟ್ ನಲ್ಲಿ ಸರಿಯಾದ ನಿಖರ ಮಾಹಿತಿಯಿಲ್ಲ ಎಂದು ‘ಲೈಂಗಿಕ ದೌರ್ಜನ್ಯ ದಕ್ಷಿಣ ಏಷ್ಯಾ, ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅಡಚಣೆಗಳು ‘ ಎಂಬ ರಿಪೋರ್ಟ್ ತಿಳಿಸಿದೆ. ಇದರ ಜೊತೆಗೆ ಜಂಟಿಯಾಗಿ ‘NGO’s ಈಕ್ವಾಲಿಟಿ ನೌ ಅಂಡ್ ಡಿಗ್ನಿಟಿ ಅಲಿಯನ್ಸ್ ಇಂಟರ್ ನ್ಯಾಷಿನಲ್ ‘ ಸಂಶೋಧನೆ ನಡೆಸಿದೆ.
ಅದ್ರಲ್ಲೂ ಮುಖ್ಯವಾಗಿ ಭಾರತ ಮತ್ತು ಇತರೇ ದೇಶಗಳಲ್ಲಿ ಸಂತ್ರಸ್ತರು ಹಾಗೂ ಕುಟುಂದವರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಮುಖ್ಯವಾಗಿ ಅವರು ಪಕ್ಷಪಾತ ಧೋರಣೆಯಿಂದ ಅನೇಕರು ಪ್ರಕರಣಗಳನ್ನ ದಾಖಲಿಸಲು ಹೆದರುವ ಪರಿಸ್ಥಿತಿ ಇದೆ ಎಂದು ವರದಿ ತಿಳಿಸಿದೆ.
ಇನ್ನೂ ಆಘಾತಕಾರಿ ವಿಚಾರ ಅಂದ್ರೆ ದಕ್ಷಿಣ ಏಷ್ಯಾದಲ್ಲಿ ಇಂತಹ ಸಮಸ್ಯೆ ಎದುರಿಸುತ್ತಿರುವ ಪ್ರಮುಖ 6 ದೇಶಗಳ ಪೈಕಿ ಭಾರತವೂ ಒಂದಾಗಿದೆ. ಇಂತಹ ದೇಶಗಳಲ್ಲಿ ಲೈಂಗಿಕ ದೌರ್ಜನ್ಯಗಳ ತಡೆಗಟ್ಟಲು ಕಠಿಣ ಕಾನೂನು ಕ್ರಮ , ಕಾನೂನು ಸುಧಾರಣೆಗಳನ್ನ ಶೀಘ್ರವೇ ತರಲೇಬೇಕಾದ ಅನಿವಾರ್ಯತೆ ಇರುವುದಾಗಿ ವರದಿ ನತಿಳಿಸಿದೆ. ಈ ವರದಿಯು ಮುಖ್ಯವಾಗಿ 6 ದೇಶಗಳನ್ನ ಹೈಲೈಟ್ ಮಾಡಿದೆ. ಅದ್ರಲ್ಲಿ ಬಾಂಗ್ಲಾದೇಶ , ಭೂತಾನ್ , ನೇಪಾಳ, ಮಾಲ್ಡೀವ್ಸ್ , ಭಾರತ , ಶ್ರೀಲಂಕಾ.
ಇನ್ನೂ ಕೊರೊನಾ ಪ್ಯಾಂಡೆಮಿಕ್ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತಾಗಿ ದಾಖಲಾದ ಕೇಸ್ ಗಳ ಸಂಖ್ಯೆ 2019 ಕ್ಕೆ ಹೋಲಿಕೆ ಮಾಡಿದ್ರೆ ಕುಸಿತ ಕಂಡಿದೆ. ಆದ್ರೆ ಇದರ ಅರ್ಥ ಇಂತಹ ಪ್ರಕರಣಗಳು ನಡೆಯುತ್ತಿಲ್ಲವೆಂದಲ್ಲ. ಬದಲಾಗಿ ಸಮಾಜಕ್ಕೆ ಹೆದರಿ , ಮನೆಯವರ ಮಾತಿಗೆ ಕಟ್ಟುಬಿದ್ದು, ಬ್ಲಾಕ್ ಮೇಲ್ ಗಳಿಂದ ಹೆದರಿಕೊಂಡು, ಮಾನ ಮರ್ಯಾದೆಗೆ ಅಂಜಿ, ಕೊರೊನಾ ಸಮಯದಲ್ಲಿ ಹೊರಗೆ ಬಾರದೇ ಯಾರದ್ದೋ ಕಪಿಮುಷ್ಠಿಯಲ್ಲಿ ಸಿಲುಕಿ ಮಹಿಳೆಯರು ದೂರು ದಾಖಲಿಸಲು ಹಿಂದೇಟು ಹಾಕಿದ್ದಾರಷ್ಟೇ ಎಂದು ವರದಿ ತಿಳಿಸಿದೆ.
ಉದಾಹರಣಗೆ ವರದಿಯಲಿನ ಅಂಕಿ ಅಂಶಗಳ ಅನ್ವಯ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ 2019ರಲ್ಲಿ 139 ಕೇಸ್ ಗಳು ದಾಖಲಾಗುತ್ತಿದ್ದರೆ ಅದು ಕೊರೊನಾ ಸಮಯದಲ್ಲಿ 23 ಕ್ಕೆ ಇಳಿಕೆ ಕಂಡಿರುವುದಾಗಿಯೂ ವರದಿಯಲ್ಲಿ ಉಲ್ಲೇಖವಾಗಿದೆ. ಇನ್ನೂ ದಕ್ಷಿಣ ಏಷಾಯ ಭಾಗದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಕೆಲವೊಮ್ಮೆ ಅವರ ದೂರುಗಳನ್ನೂ ಸಹ ಪೊಲೀಸರು ದಾಖಲು ಮಾಡಿಕೊಂಡಿಲ್ಲ ಎಂದು ವರದಿಯಲ್ಲಿದೆ.
2020 ರಲ್ಲಿ ಅದ್ರಲ್ಲೂ ಪ್ಯಾಂಡೆಮಿಕ್ ( ಲಾಕ್ ಡೌನ್ ) ಸಂದರ್ಭದಲ್ಲಿ ನ್ಯಾಯಾಲಯಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ಸ್ಥಬ್ಧ , ಪೊಲೀಸ್ ಠಾಣೆಗಲಲ್ಲಿ ದೂರು ದಾಖಲು ಮಾಡಲು ಸವiಸ್ಯೆ ಎದುರಿಸುವುದು, ಕೆಲ ಪೊಲೀಸ್ ಅಧಿಕಾರಿಗಳ ನಿಲಕ್ಷ್ರ್ಯ ಧೋರಣೆ, ಕೆಲವರು ದೂರು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರಿಂದ, ನ್ಯಾಯಾಲಯಗಳಲ್ಲಿ ವಿಚಾರಣೆಗಳ ತಡವಾದ ಹಿನ್ನೆಲೆ, ಇಂತಹ ಸಮಸ್ಯೆಗಳಿಂದಾಗಿ ಅನೇಕರಿಗೆ ಸೂಕ್ತ ನ್ಯಾ ಸಿಕ್ಕಿಲ್ಲ. ಇನ್ನೂ ಹಲವರ ಕೇಸ್ ಗಳೇ ದಾಖಲಾಗದೇ ಉಳಿದು ಹೋಗಿದೆ ಎಂದು ವರದಿ ತಿಳಿಸಿದೆ. ಇಂತಹ ಪರಿಸ್ಥಿತಿ ಹೆಚ್ಚಾಗಿ ಬಾರತದಲ್ಲಿಯೇ ಇದೆ ಎಂದು ಸಹ ವರದಿಯಿಂ ತಿಳಿದುಬಂದಿದೆ.
ಅದ್ರಲ್ಲೂ ಹೆಚ್ಚಾಗಿ ಮೇಲಾಧಿಕಾರಿಗಳಿಂದ ಅತ್ಯಾಚಾರ , ಶಿಕ್ಷಕರಿಂದ, ಸಂಬಂಧಿಕರಿಂದಲೇ ಅತ್ಯಾಚಾರ, ಅಪ್ರಾಪ್ತರ ಮೇಲೆಯೇ ಹೆಚ್ಚಾಗಿ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಅಧ್ಯಯನದಲ್ಲಿ ಸೇರಿಸಲಾದ ಆರು ದೇಶಗಳಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ ಸಂಗಾತಿಗಳ ವೈವಾಹಿಕ ಅತ್ಯಾಚಾರಕ್ಕೆ ಕಾನೂನುಗಳು ಸ್ಪಷ್ಟವಾಗಿ ಅನುಮತಿ ನೀಡುತ್ತವೆ ಎಂದು ತಿಳಿಸಿದೆ.
ದಕ್ಷಿಣ ಏಷ್ಯಾದಾದ್ಯಂತದ ಸರ್ಕಾರಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಲು ಕಾನೂನುಗಳನ್ನು ತಿದ್ದುಪಡಿ ಮಾಡಲು ಹಿಂಜರಿಯುತ್ತಿವೆ, ಆಗಾಗ್ಗೆ ವೈವಾಹಿಕ ಅತ್ಯಾಚಾರವನ್ನು ನಿಷೇಧಿಸುವುದರಿಂದ ವಿವಾಹದ ಸಂಬಂಧ ಅಸ್ಥಿರಗೊಳ್ಲುತ್ತದೆ ಎಂಬ ವಾದವನ್ನು ತೆಗೆದುಕೊಳ್ಳುತ್ತಾರೆ. ಸರ್ಕಾರಗಳಿಂದ ಪ್ರತಿಕ್ರಿಯೆಯ ಕೊರತೆಯ ಹೊರತಾಗಿಯೂ, ದಕ್ಷಿಣ ಏಷ್ಯಾದಾದ್ಯಂತದ ಮಹಿಳಾ ಹಕ್ಕುಗಳ ಕಾರ್ಯಕರ್ತರು ದಶಕಗಳಿಂದ ವೈವಾಹಿಕ ಅತ್ಯಾಚಾರಕ್ಕೆ ಅನುಮತಿ ನೀಡುವ ಪುರಾತನ ಅಪರಾಧ ಕಾನೂನುಗಳಿಗೆ ತಿದ್ದುಪಡಿ ತರಲು ಸಲಹೆ ನೀಡುತ್ತಿದ್ದಾರೆ.
ವರದಿಯ ಪ್ರಕಾರ, ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನ್ಯಾಯ ವ್ಯವಸ್ಥೆಯ ಭಾಗವಾಗಿರುವ ಅಧಿಕಾರಿಗಳು, ಲಂಚ ಮತ್ತು ಭ್ರಷ್ಟಾಚಾರಕ್ಕೆ ಒಳಗಾಗುವ ಅಧಿಕಾರಿಗಳು – ಪೊಲೀಸ್, ವೈದ್ಯಕೀಯ ಅಧಿಕಾರಿಗಳು ಮತ್ತು ಸಾರ್ವಜನಿಕ ಅಭಿಯೋಜಕರು ತೀವ್ರವಾಗಿರುವುದರಿಂದ ಸಂತ್ರಸ್ತರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ವರದಿ ತಿಳಿಸಿದೆ. ಇದು ಸಂತ್ರಸ್ತರಿಗೆ ನ್ಯಾಯಕ್ಕಾಗಿ ಹೋರಾಡಲು ಸವಾಲಾಗಿದೆ ಎಂದಿದ್ದಾರೆ. ಭಾರತ, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ, ಬದುಕುಳಿದವರಲ್ಲಿ 60% ಜನರು ತಮ್ಮ ಪ್ರಕರಣದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅಥವಾ ರಾಜಿ ಮಾಡಿಕೊಳ್ಳಲು ಒತ್ತಡವನ್ನು ಎದುರಿಸುತ್ತಿದ್ದಾರೆಂದು ವರದಿ ಮಾಡಿದೆ.
ಭಾರತ ಮತ್ತು ಇತರ ದೇಶಗಳಲ್ಲಿ ಕಡಿಮೆ ಶಿಕ್ಷೆಯ ಪ್ರಮಾಣವು ಸಂತ್ರಸ್ತರಿಗೆ ಸವಾಲಾಗಿದ್ದು, ಆರೋಪಿಗಳನ್ನ ಭಯಮುಕ್ತರಾಗಿ ಮಾಡ್ತಿದೆ ಎಂದು ಸಹ ವರದಿಯು ತಿಳಿಸಿದೆ.
ಏರ್ ಆಂಬ್ಯುಲೆನ್ಸ್ ಮೂಲಕ ಕೊರೊನಾ ಸೋಂಕಿತೆಗೆ ಚಿಕಿತ್ಸೆ ಕೊಡಿಸಿದ ‘ರಿಯಲ್ ಹೀರೋ’ ಸೋನು..!
ಡಾ. ರಾಜ್ ಕುಮಾರ್ ಅವರ 92ನೇ ಹುಟ್ಟುಹಬ್ಬ : ವರನಟನ ನೆನಪಲ್ಲಿ ವಿಶೇಷ ಹಾಡು ಹಾಡಿದ ಅಪ್ಪು..!
ಮಾಸ್ಕ್ ಗೆ ಹಣವಿಲ್ಲದೇ ಹಕ್ಕಿ ಗೂಡನ್ನೆ ಮಾಸ್ಕ್ ಮಾಡಿಕೊಂಡ ವೃದ್ಧ








