ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಮೀತಿ ಮೀರುತ್ತಿದೆ. ಎಲ್ಲಾ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರವೂ ಸ್ತಬ್ದಗೊಂಡಿದೆ. ಅದ್ರಲ್ಲೂ ವಿಶ್ವ ಕ್ರಿಕೆಟ್ ನ ಪ್ರಮುಖ ಟೂರ್ನಿಗಳು ರದ್ದುಗೊಂಡಿವೆ. ಹೀಗಾಗಿ ಕ್ರಿಕೆಟ್ ಮಂಡಳಿಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮುಂದಿನ ಆಗಸ್ಟ್ ನಲ್ಲಿ ಟಿ-ಟ್ವೆಂಟಿ ಸರಣಿಯನ್ನು ಸಂಘಟಿಸಲು ಪ್ಲಾನ್ ಮಾಡಿಕೊಳ್ಳುತ್ತಿದೆ.
ಈ ಹಿಂದೆ ನಿಗದಿಯಾಗಿದ್ದಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮುಂಬರುವ ಆಗಸ್ಟ್ ನಲ್ಲಿ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿ ನಡೆಯಬೇಕಿತ್ತು. ಆದ್ರೆ ಈ ಸರಣಿಗೆ ಈಗ ಕೊರೋನಾ ವೈರಸ್ ಅಡ್ಡಿಯನ್ನುಂಟು ಮಾಡುತ್ತಿದೆ. ಆದ್ರೂ ಈ ಸರಣಿಯನ್ನು ನಡೆಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಚಿಂತನೆಯನ್ನು ನಡೆಸುತ್ತಿದೆ.
ಹೌದು, ನಾವು ಈ ಸರಣಿಯನ್ನು ನಡೆಸುವ ಬಗ್ಗೆ ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದೇವೆ. ಅಲ್ಲದೆ ಈ ಬಗ್ಗೆ ಮಾತುಕತೆ ಕೂಡ ನಡೆಸಿದ್ದೇವೆ. ಆದ್ರೆ ಆಗಸ್ಟ್ ವೇಳೆ ಏನು ಆಗುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಇದೊಂದು ಆಶಾವಾದ ಅಷ್ಟೇ ಅಂತ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.
ಇಂದಿನ ದಿನಗಳಲ್ಲಿ ಕ್ರಿಕೆಟ್ ಒಂದು ಬಿಸಿನೆಸ್ ಥರಾ ಆಗಿದೆ. ಅದಕ್ಕಾಗಿ ನಾವು ಎಲ್ಲಾ ಅವಕಾಶಗಳ್ನು ಬಳಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂದು ಸ್ಮಿತ್ ಹೇಳಿದ್ದಾರೆ. ಆದ್ರೆ ದಕ್ಷಿಣ ಆಫ್ರಿಕಾದ ಈ ಮನವಿಗೆ ಬಿಸಿಸಿಐ ಒಪ್ಪಿಕೊಳ್ಳುತ್ತಾ ಅನ್ನೋದನ್ನು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾದ ಜೊತೆ ಟಿ-ಟ್ವೆಂಟಿ ಸರಣಿಯನ್ನು ಆಡಲು ಬಿಸಿಸಿಐ ಒಪ್ಪಿಕೊಳ್ಳುವುದು ಕಷ್ಟ ಅನ್ಸುತ್ತೆ.
ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ರದ್ದುಗೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿ ಮತ್ತು ಐದು ಟಿ-ಟ್ವೆಂಟಿ ಪಂದ್ಯಗಳ ಸರಣಿ ಜುಲೈ ನಲ್ಲಿ ನಡೆಯಬೇಕಿದೆ. ಈ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಅಥವಾ ದಕ್ಷಿಣ ಆಫ್ರಿಕಾದಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಅಂತಾರೆ ಗ್ರೇಮ್ ಸ್ಮಿತ್.








