ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಶ್ರೀಲಂಕ, ಭಾರತದಿಂದ ಸಹಕಾರ
ದ್ವೀಪ ರಾಷ್ಟ್ರ ಶ್ರೀಲಂಕಾದ ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಲು ನಾಲ್ಕು ಅಂಶಗಳ ಪ್ಯಾಕೇಜ್ ಅನ್ನು ರೂಪಿಸಿದೆ. ಭಾರತ ಮತ್ತು ಶ್ರೀಲಂಕಾವು ಆಹಾರ ಮತ್ತು ಔಷಧಿಗಳ ಆಮದು, ಕರೆನ್ಸಿ ಸ್ವಾಪ್ ವ್ಯವಸ್ಥೆ, ಆರ್ಥಿಕ ಸಹಕಾರವನ್ನು ಗಟ್ಟಿಗೊಳಿಸಲು ಭಾರತ ಕೈ ಜೋಡಿಸುತ್ತಿದೆ.
ಬುಧವಾರ ಮತ್ತು ಗುರುವಾರದಂದು ಶ್ರೀಲಂಕಾದ ವಿತ್ತ ಸಚಿವ ಬಸಿಲ್ ರಾಜಪಕ್ಸೆ ಅವರು ತಮ್ಮ ಭಾರತೀಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ನಡೆಸಿದ ಎರಡು ಸಭೆಗಳಲ್ಲಿ ಪ್ಯಾಕೇಜ್ ಅನ್ನು ಅಂತಿಮಗೊಳಿಸಲಾಯಿತು.
ಜುಲೈನಲ್ಲಿ ಅಧಿಕಾರ ವಹಿಸಿಕೊಂಡ ನಂತರ ರಾಜಪಕ್ಸೆ ಅವರ ಮೊದಲ ವಿದೇಶಿ ಭೇಟಿ ಇದಾಗಿದೆ.ಗುರುವಾರ ರಾಜಪಕ್ಸೆ ಅವರ ಭೇಟಿಯ ಕೊನೆಯಲ್ಲಿ ಶ್ರೀಲಂಕಾ ಹೈಕಮಿಷನ್ ನೀಡಿದ ಹೇಳಿಕೆಯ ಪ್ರಕಾರ, ಎರಡು ಕಡೆಯವರು ಅಲ್ಪ ಮತ್ತು ಮಧ್ಯಮ ಅವಧಿಯ ಸಹಕಾರಕ್ಕಾಗಿ ಚರ್ಚಿಸಿದ್ದೇವೆ ಎಂದು ತಿಳಿಸಿದೆ.
ಆಹಾರ ಮತ್ತು ಆರೋಗ್ಯ ಭದ್ರತಾ ಪ್ಯಾಕೇಜ್ ಅನ್ನು ತುರ್ತು ಆಧಾರದ ಮೇಲೆ ಒಳಗೊಂಡಿವೆ, ಇದು ಶ್ರೀಲಂಕಾದಿಂದ ಆಹಾರ, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ಆಮದುಗಳ ಮೂಲಕ ಭಾರತದಿಂದ ಸಾಲದ ವಿಸ್ತರಣೆಯನ್ನ ಕಲ್ಪಿಸಲಾಗಿದೆ