ICC events | India | ಐಸಿಸಿ ಟೂರ್ನಿಗಳೆಂದರೆ ಟೀಂ ಇಂಡಿಯಾಗೆ ಭಯವಂತೆ
ಕಳೆದ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಕನಿಷ್ಠ ಸೆಮಿ ಫೈನಲ್ ಗೆ ಹೋಗದೇ ನಿರಾಸೆ ಅನುಭವಿಸಿತ್ತು.
ಇದಾದ ಬಳಿಕ ಕ್ಯಾಪ್ಟನ್ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿದರು. ರೋಹಿತ್ ಶರ್ಮಾ ನಾಯಕರಾದ ಬಳಿಕ ದೇಶ ವಿದೇಶಗಳಲ್ಲಿ ಸರಣಿಗಳನ್ನು ಗೆದ್ದರೂ ಏಷ್ಯಾಕಪ್ ನಲ್ಲಿ ನೀರಸ ಪ್ರದರ್ಶನ ನೀಡಿದೆ.
ಆ ಮೂಲಕ ಬರಿ ಗೈನಲ್ಲಿ ಟೂರ್ನಿಯಿಂದ ವಾಪಸ್ ಆಯ್ತು.
ಇದೀಗ ಟಿ 20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾ ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾವನ್ನು ಉದ್ದೇಶಿಸಿ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಾಸಿರ್ ಹುಸೇನ್ ಮಾತನಾಡಿದ್ದು, ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಮೈ ಚಳಿ ಬಿಟ್ಟು ಆಡುವುದಿಲ್ಲ, ಬದಲಿಗೆ ಭಯಪಡುತ್ತಾ ಆಡುತ್ತದೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ದೇಶ – ವಿದೇಶದಲ್ಲಿ ಎಲ್ಲಾ ತಂಡಗಳನ್ನು ಸೋಲಿಸುತ್ತದೆ. ಬೆಂಚ್ ಸ್ಟ್ರೇಂಥ್ ಕೂಡ ಚೆನ್ನಾಗಿದೆ. ಎಷ್ಟೋ ಮಂದಿ ಪ್ರತಿಭಾನ್ವಿತ ಆಟಗಾರರು ತಂಡದಲ್ಲಿದ್ದಾರೆ.
ಆದ್ರೆ ಐಸಿಸಿ ಈವೆಂಟ್ ಗಳಲ್ಲಿ ಭಾರತ ತಂಡ ಭಯಪಡುತ್ತಾ ಆಡುತ್ತದೆ. ಕಳೆದ ಟಿ 20 ವಿಶ್ವಕಪ್ ನ ಪವರ್ ಪ್ಲೇ ನಲ್ಲಿ ಅವರ ಆಟ ನೋಡಿದ್ರೆ ಅದು ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂದು ನಾಸಿರ್ ಹೇಳಿದ್ದಾರೆ.
ಇನ್ನು ಈ ಬಾರಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪ್ರಮುಖ ಆಟಗಾರರ ಅಲಭ್ಯತೆ ಕಾಡಲಿದೆ.
ಜಡೇಜಾ, ಬುಮ್ರಾ ತಂಡದಿಂದ ದೂರವಾಗಿರುವುದು ಟೀಂ ಇಂಡಿಯಾಗೆ ದೊಡ್ಡ ಹೊಡೆತ ಎಂದು ಅಭಿಪ್ರಾಯಪಟ್ಟಿದ್ದಾರೆ.








