ಉಕ್ರೇನ್ – ರಷ್ಯಾ ಯುದ್ಧದಿಂದ ಪೂರೈಕೆಗೆ ಅಡ್ಡಿ, ಈಜಿಪ್ಟ್‌ಗೆ ಗೋಧಿ ರಪ್ತು ಮಾಡಲಿದೆ ಭಾರತ
ಈ ವರ್ಷ ಭಾರತವು ಈಜಿಪ್ಟ್‌ಗೆ ಗೋಧಿಯನ್ನು ರಫ್ತು ಮಾಡಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಘೋಷಿಸಿದ್ದಾರೆ. ವಿಶ್ವದ ಅತಿದೊಡ್ಡ ಗೋಧಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಈಜಿಪ್ಟ್ ಸಹ ಒಂದು. ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಅಧ್ಯಕ್ಷ ಎಂ.ಅಂಗಮುತ್ತು ಮಾತನಾಡಿ, ಈ ವರ್ಷ ಈಜಿಪ್ಟ್‌ಗೆ ಮೂರು ಮಿಲಿಯನ್ ಟನ್ ಗೋಧಿ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈಜಿಪ್ಟ್ 2021 ರಲ್ಲಿ 6.1 ಮಿಲಿಯನ್ ಟನ್ ಗೋಧಿಯನ್ನು ಆಮದು ಮಾಡಿಕೊಂಡಿತು ಮತ್ತು ಈಜಿಪ್ಟ್‌ಗೆ ಗೋಧಿಯನ್ನು ರಫ್ತು ಮಾಡಬಹುದಾದ ಮಾನ್ಯತೆ ಪಡೆದ ದೇಶಗಳ ಪಟ್ಟಿಯಲ್ಲಿ ಭಾರತವು ಇದುವರೆಗೆ ಭಾಗವಾಗಿರಲಿಲ್ಲ.
ಈಜಿಪ್ಟ್‌ನ ಗೋಧಿ ಆಮದು 2021 ರಲ್ಲಿ ಸುಮಾರು ಎರಡು ಶತಕೋಟಿ US ಡಾಲರ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಕಳೆದ ತಿಂಗಳು ದುಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗೋಯಲ್ ಅವರು ಈಜಿಪ್ಟ್‌ನ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಡಾ. ಹಾಲಾ ಎಲ್-ಸೈದ್ ಅವರನ್ನು ಭೇಟಿ ಮಾಡಿದ್ದರು ಮತ್ತು ಈಜಿಪ್ಟ್‌ನ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಗೋಧಿಯನ್ನು ಪೂರೈಸಲು ಭಾರತದ ಸಿದ್ಧತೆಯ ಬಗ್ಗೆ ಚರ್ಚಿಸಿದ್ದರು.
ಈಜಿಪ್ಟ್‌ನ ಅಗ್ರಿಕಲ್ಚರ್ ಕ್ವಾರಂಟೈನ್ ಮತ್ತು ಪೆಸ್ಟ್ ರಿಸ್ಕ್ ಅನಾಲಿಸಿಸ್‌ನ ಅಧಿಕಾರಿಗಳು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲಿ ವಿವಿಧ ಸಂಸ್ಕರಣಾ ಘಟಕಗಳು, ಬಂದರು ಸೌಲಭ್ಯಗಳು ಮತ್ತು ಫಾರ್ಮ್‌ಗಳಿಗೆ ಭೇಟಿ ನೀಡಿದರು. ಭಾರತಕ್ಕೆ ಈಜಿಪ್ಟ್ ನಿಯೋಗದ ಭೇಟಿಯು ವಿವಿಧ ಗೋಧಿ ಆಮದು ಮಾಡಿಕೊಳ್ಳುವ ದೇಶಗಳೊಂದಿಗೆ ಹಲವಾರು ವ್ಯಾಪಾರ ಮಾತುಕತೆಗಳು ಮತ್ತು ಸಭೆಗಳನ್ನು ಅನುಸರಿಸುತ್ತದೆ, ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಕಾರಣದಿಂದಾಗಿ ಗೋದಿ ಪೂರೈಕೆಗೆ ಅಡ್ಡಿಯಾಗಿರುವುದರಿಂದ ಪರ್ಯಾಯ ಮೂಲಗಳಿಂದ ಧಾನ್ಯವನ್ನು ಪಡೆಯುವ ಸಾಧ್ಯತೆಗಳನ್ನು ಈಜಿಫ್ಟ್ ಅನ್ವೇಷಿಸುತ್ತಿದೆ.








