ಟೆಸ್ಟ್ ಕ್ರಿಕೆಟ್ ಸಾಮ್ರಾಜ್ಯಕ್ಕೆ ನಾವೇ ಸಾಮ್ರಾಟರು..! India saaksha tv
ವಿಶ್ವಕಪ್, ಐಸಿಸಿ ಟೂರ್ನಿಗಳ ಟ್ರೋಫಿ ಗೆಲ್ಲದೇ ಇದ್ದರೂ ಟೀಂ ಇಂಡಿಯಾ ವಿಶ್ವಕ್ರಿಕೆಟ್ ನ ಸಾಮ್ರಾಟ. ಕೇವಲ ಒಂದೆರಡು ಪಂದ್ಯಗಳು ಒಂದು ತಂಡದ ಸಾಮರ್ಥ್ಯವನ್ನ ನಿರ್ಧರಿಸಲಾರವು ಎಂಬ ವಿರಾಟ್ ಕೊಹ್ಲಿಯ ಮಾತು ಭಾರತಕ್ಕೆ ನೂರಕ್ಕೆ ನೂರು ಅನ್ವಯವಾಗುತ್ತದೆ.
ಹೌದು..! ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ 2019ರಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಸೆಮೀಸ್ ವರೆಗೆ ತಲುಪಿತ್ತು. ಬಳಿಕ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ಎಡವಿದೆ. ಇದಾದ ನಂತರ ಈ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಕನಿಷ್ಠ ಸೆಮೀಸ್ ಗೆ ತಲುಪಲಿಲ್ಲ. ಆದ್ರೂ ಟೀಂ ಇಂಡಿಯಾ ಎಲ್ಲಾ ಕ್ರಿಕೆಟ್ ಮಾದರಿಯಲ್ಲಿ ಅಗ್ರ ತಾಂಬುಲವನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ ನಲ್ಲಂತೂ ಟೀಂ ಇಂಡಿಯಾ ಸಾಮ್ರಾಟನಂತೆ ಮೆರೆಯುತ್ತಿದೆ.
ಇದೀಗ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ಅದ್ಭುತ ಗೆಲುವಿನೊಂದಿಗೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಂಕಪಟ್ಟಿಯಲ್ಲಿ ಟಿಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ. 124 ಅಂಕಗಳೊಂದಿಗೆ ಟೀಂ ಇಂಡಿಯಾ ಮೊದಲ ಸ್ಥಾನ ಅಲಂಕರಿಸಿದ್ದರೇ ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಇದೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ, ನಾಲ್ಕರಲ್ಲಿ ಇಂಗ್ಲೆಂಡ್ ಇದೆ.
2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಟೀಮ್ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಸರಣಿಯನ್ನು ಆಡಿದೆ. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು… ಆದರೆ ಮುಂಬೈ ಟೆಸ್ಟ್‌ನಲ್ಲಿ ಕೊಹ್ಲಿ ಸೇನೆ ಭರ್ಜರಿ ಜಯ ಸಾಧಿಸಿದೆ. ಇದರ ಭಾಗವಾಗಿ ಟೀಂ ಇಂಡಿಯಾ ಇದೀಗ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ.
ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸಾಕಷ್ಟು ಬದಲಾಗಿದೆ. ದೇಶ – ವಿದೇಶಗಳಲ್ಲಿ ಸರಣಿಗಳನ್ನು ವಶಪಡಿಸಿಕೊಳ್ಳುತ್ತಾ ಅಬ್ಬರಿಸುತ್ತಿದೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿಯ ಆಕ್ರಮಣಕಾರಿ, ಡೋಂಟ್ ಗೀವ್ ಅಪ್ ಆಟಿಟ್ಯೂಡ್. ಇದು ತಂಡದ ಮೇಲೆ ಹಾಗೂ ತಂಡದ ಆಟಗಾರರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಶೈನ್ ಆಗುತ್ತಿದೆ.









