India Tour Of West Indies | ಭಾರತ – ವಿಂಡೀಸ್ ಸರಣಿ ವೇಳಾಪಟ್ಟಿ ಪ್ರಕಟ
ತವರಿನಲ್ಲಿ ಸೌತ್ ಆಫ್ರೀಕಾ ಸವಾಲಿನ ಬಳಿಕ ಟೀಂ ಇಂಡಿಯಾ ಜುಲೈ ಅಂತ್ಯದಲ್ಲಿ ವೆಸ್ಟ್ ಇಂಡೀಸ್ ಮೇಲೆ ದಂಡಯಾತ್ರೆ ನಡೆಸಲಿದೆ.
ಕೆರಿಬಿಯನ್ ನಾಡಿನಲ್ಲಿ ಟೀಂಇಂಡಿಯಾ ಮೂರು ಏಕದಿನ ಮತ್ತು ಐದು ಟಿ 20 ಪಂದ್ಯಗಳನ್ನಾಡಲಿದೆ.
ಜುಲೈ 22 ರಿಂದ ಆಗಸ್ಟ್ 7 ರವರೆಗೆ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ 20 ಸರಣಿಯನ್ನಾಡಲಿದೆ.
ಈ ಸಂಬಂಧ ಬುಧವಾರ ಇಂಡೋ – ವೆಸ್ಟ್ ಇಂಡೀಸ್ ಸಿರೀಸ್ ಗೆ ಸಂಬಂಧಿಸಿದ ಶೆಡ್ಯೂಲ್ ಅನ್ನು ವಿಂಡೀಸ್ ಕ್ರಿಕೆಟ್ ಬೋರ್ಡ್ ಪ್ರಕಟಿಸಿದೆ.
ಏಕದಿನ ಸೇರಿದಂತೆ ಮೊದಲ ಮೂರು ಟಿ 20 ಪಂದ್ಯಗಳಿಗೆ ಪೋರ್ಟ್ ಆಫ್ ಸ್ಪೇಯಿನ್, ಸೆಂಟ್ ಕಿಟ್ಸ್ ವಾರ್ನರ್ ಮೈದಾನಗಳು ಆತಿಥ್ಯವಹಿಸಲಿದೆ.
ಕೊನೆಯ ಎರಡು ಟಿ 20 ಪಂದ್ಯಗಳಿಗೆ ಯುಎಸ್ ಎ ನಲ್ಲಿನ ಪ್ಲೊರಿಡಾ ವೇದಿಕೆಯಾಗಲಿದೆ. ಇನ್ನು ಈ ಸಿರೀಸ್ ಗೆ ಸಂಬಂಧಿಸಿದಂತೆ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ಶೀಘ್ರದಲ್ಲಿಯೇ ಪ್ರಕಟಿಸಲಿದೆ.
ವನ್ ಡೇ ಸೀರಿಸ್ ಶೆಡ್ಯೂಲ್ ಹೀಗಿದೆ.
ಮೊದಲ ಏಕದಿನ ಪಂದ್ಯ ಜುಲೈ 22 ರಂದು, ಎರಡನೇ ಒನ್ ಡೇ ಪಂದ್ಯ 24 ರಂದು, ಮೂರನೇ ಏಕದಿನ ಪಂದ್ಯ ಜುಲೈ 27 ರಂದು ಕ್ವಿನ್ಸ್ ಪಾರ್ಕ್ ಓವಲ್ ನಲ್ಲಿ ನಡೆಯಲಿದೆ.

ಟಿ 20 ಸರಣಿ ಶೆಡ್ಯೂಲ್ ಹೀಗಿದೆ.
ಮೊದಲ ಟಿ 20 ಜುಲೈ 29 ರಂದು ಬಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಟಿ 20 ಆಗಸ್ಟ್ 1 ರಂದು, ಮೂರನೇ ಟಿ 20 ಪಂದ್ಯ ಆಗಸ್ಟ್ 2 ರಂದು ವಾರ್ನರ್ ಪಾರ್ಕ್ ನಲ್ಲಿ ನಡೆಯಲಿದೆ.
ನಾಲ್ಕನೇ ಟಿ 20 ಪಂದ್ಯ ಆಗಸ್ಟ್ ಆರರಂದು ಬ್ರೋವಾರ್ಡ್ ಕೌಂಟಿ ಗ್ರೌಂಡ್ ನಲ್ಲಿ, ಐದನೇ ಟಿ 20 ಪಂದ್ಯ ಆಗಸ್ಟ್ ಏಳರಂದು ವ್ರೊವಾರ್ಡ್ ಕೌಂಟಿ ಗ್ರೌಂಡ್ ನಲ್ಲಿ ನಡೆಯಲಿದೆ.
ಐಪಿಎಲ್ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ರೆಗ್ಯೂಲರ್ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಜೂನ್ 9 ರಿಂದ ಸೌತ್ ಆಫ್ರಿಕಾ ಜೊತೆಗೆ ಟಿ 20 ಸರಣಿ ನಡೆಯಲಿದೆ.
ಇದಕ್ಕಾಗಿ ಟೀಂ ಇಂಡಿಯಾ ಜೂನ್ ಐದರಂದು ಡೆಲ್ಲಿಗೆ ಹೋಗಲಿದೆ. ಸೌತ್ ಆಫ್ರಿಕಾ ಸಿರೀಸ್ ಮುಗಿದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ಗೆ ಪ್ರಯಣಿಸಲಿದೆ.
ಇಂಗ್ಲೆಂಡ್ ನಲ್ಲಿ ಜೂನ್ 24 ರಿಂದ ಜುಲೈ 17 ವರೆಗೂ ಒಂದು ಟೆಸ್ಟ್, ಮೂರು ಏಕದಿನ, ಮೂರು ಟಿ 20 ಪಂದ್ಯಗಳನ್ನು ಆಡಲಿದೆ.
ಅಲ್ಲಿಂದ ಟೀಂ ಇಂಡಿಯಾ ನೇರವಾಗಿ ವೆಸ್ಟ್ ಇಂಡೀಸ್ ನೆಲಕ್ಕೆ ಕಾಲಿಡಲಿದ್ದಾರೆ. ಆ ಬಳಿಕ ಏಷಿಯಾ ಕಪ್, ಟಿ 20 ವಿಶ್ವಕಪ್ ನೊಂದಿಗೆ 2022 ವರ್ಷವನ್ನು ಟೀಂ ಇಂಡಿಯಾ ಮುಗಿಸಿಲಿದೆ.








