ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ವಾಯುದಾಳಿ ಬಳಿಕ ಭಾರತದ ರಕ್ಷಣಾ ಪಡೆಯು ಅಮೆರಿಕ ಹಾಗೂ ಇಸ್ರೇಲ್ ದೇಶಗಳಿಗೆ ಸಮಾನ ದೇಶವಾಗಿ ಹೊರಹೊಮ್ಮಿದೆ. ಶತ್ರುದೇಶದೊಳಗೆ ನುಗ್ಗಿ ಯುದ್ಧ ಮಾಡುವ ಸಾಮಥ್ರ್ಯ ಹೊಂದಿದೆ ಎಂದು ನಮ್ಮ ದೇಶ ತೋರಿಸಿಕೊಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತ ಸೇನಾ ಸಾಮಥ್ರ್ಯದ ಬಗ್ಗೆ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದ ರಾಜರ್ಹತ್ ನಲ್ಲಿ ರಾಷ್ಟ್ರೀಯ ರಕ್ಷಣಾ ಪಡೆ (ಎನ್ ಎಸ್ ಜಿ) ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ರಕ್ಷಣಾ ಪಡೆ, ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಇನ್ನು 5 ವರ್ಷಗಳಲ್ಲಿ ಈಡೇರಿಸಲಿದೆ ಎಂದು ತಿಳಿಸಿದ್ರು. ತರಬೇತಿ, ಆಧುನಿಕ ಶಸ್ತ್ರಾಸ್ತ್ರ, ಕಮಾಂಡೊಗಳ ಕುಟುಂಬಸ್ಥರಿಗೆ ಸೌಲಭ್ಯ ಒದಗಿಸಿಕೊಡುವ ವಿಚಾರ ಇತ್ಯಾದಿಗಳಲ್ಲಿ ರಾಷ್ಟ್ರೀಯ ರಕ್ಷಣಾ ಪಡೆಯನ್ನು ಒಂದು ಪೂರ್ಣ ಪ್ರಮಾಣದ ಕಮಾಂಡೊ ಪಡೆಯನ್ನಾಗಿ ಪರಿವರ್ತಿಸಲಾಗುವುದು. ವಿಶ್ವದ ಬೇರೆ ರಕ್ಷಣಾ ಪಡೆಗಳಿಗಿಂತ ಭಾರತದಲ್ಲಿ ರಾಷ್ಟ್ರೀಯ ರಕ್ಷಣಾ ಪಡೆಯನ್ನು ಎರಡು ಹೆಜ್ಜೆ ಮುಂದೆ ಇಡುವುದು ಸರ್ಕಾರದ ಗುರಿಯಾಗಿದೆ ಹೇಳಿದ್ರು.
ದೇಶದಲ್ಲಿ ಸುಖಾಸುಮ್ಮನೆ ಶಾಂತಿ, ಸುವ್ಯವಸ್ಥೆಗೆ ಭಂಗ ತರುವವರು, ದೇಶವನ್ನು ವಿಭಜಿಸಲು ನೋಡುವವರಿಗೆ ಭಯ ಹುಟ್ಟಿಸುವುದು ಎನ್ ಎಸ್ ಜಿಯ ಕೆಲಸವಾಗಿದೆ. ಪ್ರಚೋದನಾಕಾರಿ ಮಾತುಗಳು, ಹಿಂಸಾಕೃತ್ಯಗಳನ್ನು ಮಾಡುವವರಿಗೆ ಎನ್ ಎಸ್ ಜಿ ಪ್ರತಿಕಾರ ಕ್ರಮಕೈಗೊಳ್ಳಲಿದೆ ಎಂದು ಅಮಿತ್ ಶಾ ಎಚ್ಚರಿಕೆ ನೀಡಿದರು.