India Vs Bangladesh : ಶತಕದ ಸನಿಹ ಅಯ್ಯರ್ , 90 ರನ್ ಗೆ ಪುಜಾರ್ ಔಟ್ – ಭಾರತ 278/6
ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಸೋತ ಬಳಿಕ ಟೀಂ ಇಂಡಿಯಾ ಮೊದಲ ಟೆಸ್ಟ್ ಗೆ ಕಣಕ್ಕಿಳಿದಿದೆ. ಭಾರತ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದೆ. ಮೊದಲ ಸೆಷನ್ ಅಲ್ಲೇ ಮೂರು ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಆಸೆರೆಯಾಗಿದ್ದಾರೆ. ಆದರೆ ಕೊನೆಯ ಓವರ್ ನಲ್ಲಿ ಕಂಬ್ಯಾಂಕ್ ಮಾಡಿದ ಬಾಂಗ್ಲಾ ಚೇತೇಶ್ವರ್ ಪೂಜಾರ ಮತ್ತು ಅಕ್ಷರ್ ಪಟೇಲ್ ಅವರನ್ನ ವಿಕೆಟ್ ಕಿತ್ತಿದ್ದಾರೆ.
ಚಟ್ಟೋಗ್ರಾಮ್ನಲ್ಲಿ ಬುಧವಾರ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. 82 ರನ್ಗಳ ವೈಯಕ್ತಿಕ ಸ್ಕೋರ್ನಲ್ಲಿ ಶ್ರೇಯಸ್ ಅಯ್ಯರ್ ಅಜೇಯರಾಗಿ ಮರಳಿದರು. ಆದರೆ ದಿನದ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ 14 ರನ್ ಗಳಿಸಿ ಔಟಾದರು.
ಅಕ್ಷರ್ ಮೊದಲು ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ (90) ತೈಜುಲ್ ಇಸ್ಲಾಂ ಎಸೆತದಲ್ಲಿ ಬೌಲ್ಡ್ ಆದರು. ಪೂಜಾರ 51 ಇನ್ನಿಂಗ್ಸ್ಗಳಿಂದ ಶತಕ ಗಳಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೂ ಮುನ್ನ ರಿಷಬ್ ಪಂತ್ (46 ರನ್), ಶುಭಮನ್ ಗಿಲ್ (20 ರನ್), ನಾಯಕ ಕೆಎಲ್ ರಾಹುಲ್ (22 ರನ್) ಮತ್ತು ವಿರಾಟ್ ಕೊಹ್ಲಿ (1 ರನ್) ವಿಕೆಟ್ ಕಳೆದುಕೊಂಡರು. ಬಾಂಗ್ಲಾ ಪರ ತೈಜುಲ್ ಇಸ್ಲಾಂ 3 ವಿಕೆಟ್ ಪಡೆದರು. ಮೆಹದಿ ಹಸನ್ ಮಿರಾಜ್ 2 ವಿಕೆಟ್ ಪಡೆದರು.
ಮೊದಲ ಸೆಷನ್ ನಲ್ಲಿ ಬಾಂಗ್ಲಾದೇಶದ ಬೌಲರ್ಗಳು ಪ್ರಾಬಲ್ಯ ತೋರಿಸಿದರು. ಊಟದ ಹೊತ್ತಿಗೆ ಭಾರತ 26 ಓವರ್ಗಳಲ್ಲಿ 85 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತ್ತು. ಇನಿಂಗ್ಸ್ ಆರಂಭಿಸಲು ಬಂದ ನಾಯಕ ಕೆಎಲ್ ರಾಹುಲ್ 22, ಶುಭಮನ್ ಗಿಲ್ 20 ಹಾಗೂ ವಿರಾಟ್ ಕೊಹ್ಲಿ 1 ರನ್ ಗಳಿಸಿ ಔಟಾದರು. ಈ ಅವಧಿಯಲ್ಲಿ ಬಾಂಗ್ಲಾದೇಶ ಪರ ತೈಜುಲ್ ಇಸ್ಲಾಂ 2 ವಿಕೆಟ್ ಪಡೆದರು. ಖಾಲಿದ್ ಅಹ್ಮದ್ ಒಂದು ವಿಕೆಟ್ ಪಡೆದರು.
ಎರಡನೇ ಅವಧಿಗೆ ಭಾರತದ ಬ್ಯಾಟ್ಸ್ಮನ್ಗಳು ಪುನರಾಗಮನ ಮಾಡಿದರೇ, ಭಾರತ ಚಹಾ ವಿರಾಮದವರೆಗೆ 4 ವಿಕೆಟ್ಗೆ 174 ರನ್ ಗಳಿಸಿತು. ಮೂರನೇ ಸೆಷನ್: ಕೊನೆಯ ಓವರ್ನಲ್ಲಿ ಪೂಜಾರ-ಅಕ್ಷರ್ ವಿಕೆಟ್ ಪತನಗೊಂಡಿದೆ. ಇದಕ್ಕೂ ಮೊದಲು ಶ್ರೇಯಸ್ ಅಯ್ಯರ್ ಮತ್ತು ಪೂಜಾರ ಉತ್ತಮ ಜೊತೆಯಾಟ ಆಡಿದರು.
India Vs Bangladesh Test – Cheteshwar Pujara Rishabh Pant Shreyas Iyer








