ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ T20 ಪಂದ್ಯ ಇಂದು ಚೆನ್ನೈನಲ್ಲಿ ನಡೆಯಲಿದೆ.
ಕೋಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಿನ್ನೆ ಅಭ್ಯಾಸದಲ್ಲಿ ಗಾಯಗೊಂಡಿದ್ದ ಅಭಿಷೇಕ್ ಶರ್ಮಾ ಪಂದ್ಯದಿಂದ ಹೊರಗುಳಿದರೆ, ಧ್ರುವ್ ಜುರೆಲ್ ತಂಡ ಸೇರಿಕೊಳ್ಳಬಹುದು. ಅಲ್ಲದೆ, ಶಮಿ ಅವರ ಫಿಟ್ನೆಸ್ ಬಗ್ಗೆ ಸಸ್ಪೆನ್ಸ್ ಮುಂದುವರೆದಿದೆ. ಸಂಜೆ 7 ಗಂಟೆಗೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್ನಲ್ಲಿ ಲೈವ್ ಪಂದ್ಯವನ್ನು ವೀಕ್ಷಿಸಬಹುದು.