ಮತ್ತೆ ಮಂಕಾದ ರೋಹಿತ್, ರಾಹುಲ್, ಕೊಹ್ಲಿ.. ಪ್ರಕಾಶಿಸಿದ ಸೂರ್ಯ.. ಇಂಗ್ಲೆಂಡ್ ಗೆ 186 ರನ್ ಗಳ ಸವಾಲು..!
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ ಎಂಟು ವಿಕೆಟ್ ಕಳೆದುಕೊಂಡು 185 ರನ್ ದಾಖಲಿಸಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಟೀಮ್ ಇಂಡಿಯಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು.
ಆದ್ರೆ ಆರಂಭದಲ್ಲೇ ಇಂಗ್ಲೆಂಡ್ ನ ಗೇಮ್ ಪ್ಲಾನ್ ವರ್ಕ್ ಔಟ್ ಆಯ್ತು. ಆರಂಭಿಕ ರೋಹಿತ್ ಶರ್ಮಾ 12 ರನ್ ಗೆ ಸೀಮಿತವಾದ್ರೆ, ಕೆ.ಎಲ್. ರಾಹುಲ್ 14 ರನ್ ಗಳಿಸಿ ಮತ್ತೆ ನಿರಾಸೆ ಮೂಡಿಸಿದ್ರು.
ಆದ್ರೆ ಸೂರ್ಯ ಕುಮಾರ್ ಯಾದವ್ ಇಂಗ್ಲೆಂಡ್ ತಂಡದ ಬೌಲರ್ ಗಳ ಬೆವರಿಳಿಸಿದ್ರು. ಆದ್ರೆ ವಿರಾಟ್ ಕೊಹ್ಲಿ ಒಂದು ರನ್‍ಗೆ ಸುಸ್ತಾಗಿಬಿಟ್ರು.
ಇನ್ನೊಂದೆಡೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯ ಕುಮಾರ್ ಯಾದವ್ ಅವರು ಆಕರ್ಷಕ 57 ರನ್ ಗಳಿಸಿ ಸ್ಯಾಮ್ ಕುರನ್‍ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಥರ್ಡ್ ಅಂಪೈರ್ ವಿವಾದಾತ್ಮಕ ತೀರ್ಪು ನೀಡಿದ್ದಾರೆ ಅನ್ನೋ ಟೀಕೆ ಕೂಡ ಕೇಳಿಬರುವಂತಿತ್ತು.
ಇನ್ನೊಂದೆಡೆ ರಿಷಬ್ ಪಂತ್ ಆಕರ್ಷಕ 30 ರನ್ ಹಾಗೂ ಶ್ರೇಯಸ್ ಅಯ್ಯರ್ ಮನಮೋಹಕ 37 ರನ್ ದಾಖಲಿಸಿ ಮಿಂಚು ಹರಿಸಿದ್ರು.
ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 11 ರನ್ ಹಾಗೂ ಶಾರ್ದೂಲ್ ಥಾಕೂರ್ ಅಜೇಯ 10 ರನ್ ಗಳಿಸಿದ್ರು. ವಾಷಿಂಗ್ಟನ್ ಸುಂದರ್ 4 ರನ್ ಗಳಿಸಿದ್ರು.
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 33ಕ್ಕೆ ನಾಲ್ಕು ವಿಕೆಟ್ ಉರುಳಿಸಿದ್ರು.
ಈ ನಡುವೆ ರೋಹಿತ್ ಶರ್ಮಾ ಟಿ-20 ಕ್ರಿಕೆಟ್ ನಲ್ಲಿ 9000 ರನ್ ದಾಖಲಿಸಿದ್ದ ಹೆಗ್ಗಳಿಕೆಗೂ ಪಾತ್ರರಾದ್ರು.
#teamindia #saakshatv @england #rohith sharma #suryakumaryadav







