ನಾಲ್ಕನೇ ಟೆಸ್ಟ್ ಪಂದ್ಯ : 205ಕ್ಕೆ ಇಂಗ್ಲೆಂಡ್ ಆಲೌಟ್
ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನೀಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 205 ರನ್ ಗಳಿಗೆ ಆಲೌಟ್ ಆಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡಕ್ಕೆ ಭಾರತೀಯ ಬೌಲರ್ ಗಳು ಆರಂಭದಿಂದಲೇ ಶಾಕ್ ಮೇಲೆ ಶಾಕ್ ನೀಡುತ್ತಾ ಸಾಗಿದ್ರು.
ಕಳೆದ ಪಂದ್ಯದಲ್ಲಿ ಮಿಂಚಿದ್ದ ಅಕ್ಷರ್ ಪಟೇಲ್ ಈ ಪಂದ್ಯದಲ್ಲೂ ಶೈನ್ ಆದ್ರು. ಮೊದಲ ಇನ್ನಿಂಗ್ಸ್ ನಲ್ಲಿ ಪಟೇಲ್ ನಾಲ್ಕು ವಿಕೆಟ್ ಪಡೆದು ಇಂಗ್ಲೆಂಡ್ ಗೆ ಕಾಡಿದ್ರು.
ಇನ್ನ ರವಿಚಂದ್ರನ್ ಅಶ್ವನ್ ಮೂರು ವಿಕೆಟ್, ಸಿರಾಜ್ ಎರಡು ವಿಕೆಟ್, ವಾಷಿಂಗ್ ಟನ್ ಒಂದು ವಿಕೆಟ್ ಪಡೆದರು.
ಇನ್ನು ಇಂಗ್ಲೆಂಡ್ ಪರ ಡಾಮ್ನಿಕ್ ಸಿಬ್ಲೆ (9), ಝಾಕ್ ಕ್ರಾವ್ಲೇ(2), ಜೋನಿ ಬೇರ್ ಸ್ಟೋವ್(28), ಜಾಯ್ ರೂಟ್ (5), ಬೆನ್ ಸ್ಟೋಕ್ಸ್ (55), ಒಲಿಯ್ ಪೆÇಪ್(29), ಡೇನಿಯಲ್ ಲಾರೆನ್ಸ್(46), ಬೆನ್ ಫೆÇೀಕ್ಸ್(10), ಡಾಮಿನಿಕ್ ಬೆಸ್ (3), ಜಾಕ್ ಲೀಚ್ (7), ಜೇಮ್ಸ್ ಆಂಡರ್ಸೆನ್ (10) ನಾಟೌಟ್ ಆಗಿ ಉಳಿದರು.










