ಚೆನ್ನೈ ಟೆಸ್ಟ್ – ರೂಟ್ ಶತಕದ ಮುಂದೆ ಕಮರಿದ ಟೀಮ್ ಇಂಡಿಯಾ ಬೌಲರ್ಸ್…!
ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ತಂಡ ಮೊದಲ ದಿನದ ಗೌರವವನ್ನು ಪಡೆದುಕೊಂಡಿದೆ. ಇಂಗ್ಲೆಂಡ್ ನಾಯಕ ನಾಯಕ ರೂಟ್ ಅವರ ಅಜೇಯ ಶತಕ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಹೈಲೈಟ್ಸ್. ಪರಿಣಾಮ ಇಂಗ್ಲೆಂಡ್ ಮೊದಲ ದಿನದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 263 ರನ್ ದಾಖಲಿಸಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ನಾಯಕನ ನಿರ್ಧಾರಕ್ಕೆ ತಕ್ಕಂತೆ ಇಂಗ್ಲೆಂಡ್ ತಂಡದ ಆರಂಭಿಕರು ಬ್ಯಾಟ್ ಬೀಸಿದ್ರು. ರೋರಿ ಬನ್ರ್ಸ್ ಮತ್ತು ಡಾಮಿನಿಕ್ ಸಿಬ್ಲೆ ಅವರು ಮೊದಲ ವಿಕೆಟ್ ಗೆ 63 ರನ್ ಪೇರಿಸಿದ್ರು.
ಈ ಹಂತದಲ್ಲಿ 33 ರನ್ ಗಳಿಸಿದ್ದ ರೋರಿ ಬನ್ರ್ಸ್ ಅವರಿಗೆ ಅಶ್ವಿನ್ ಪೆವಿಲಿಯನ್ ದಾರಿ ತೋರಿಸಿದ್ರು. ಇನ್ನೊಂದೆಡೆ ತವರಿನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಜಸ್ಪ್ರಿತ್ ಬೂಮ್ರಾ ಅವರು ಡೇನಿಯಲ್ ಲಾರೇನ್ಸ್ ಅವರನ್ನು ಪೆವಿಲಿಯನ್ ಗೆ ಕಳುಹಿಸುಲ್ಲಿ ಸಫಲರಾದ್ರು.
ಆದರೆ ಟೀಮ್ ಇಂಡಿಯಾದ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಡಾಮಿನಿಕ್ ಸಿಬ್ಲೆ ಜೊತೆ ಸೇರಿಕೊಂಡ ಇಂಗ್ಲೆಂಡ್ ನಾಯಕ ಜಾಯ್ ರೂಟ್ ಅವರು ತಂಡದ ರನ್ ಗತಿಯನ್ನು ಏರಿಸಿದ್ರು.
ಟೀಮ್ ಇಂಡಿಯಾದ ಲೆಕ್ಕಚಾರಗಳನ್ನು ಡಾಮಿನಿಕ್ ಮತ್ತು ಜಾಯ್ ರೂಟ್ ಬುಡಮೇಲು ಮಾಡಿದ್ರು. ವಿರಾಟ್ ಕೊಹ್ಲಿಯ ಗೇಮ್ ಪ್ಲಾನ್ ಗಳು ಇವರಿಬ್ಬರ ಜೊತೆಯಾಟವನ್ನು ಮುರಿಯಲು ಸಾಧ್ಯವಾಗಲಿಲ್ಲ.
ಹೀಗಾಗಿ ಜಾಯ್ ರೂಟ್ ತನ್ನ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕದ ಸಂಭ್ರಮದಲ್ಲೂ ತೇಲಾಡಿದ್ರು. ಅಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕದ ಸಂಖ್ಯೆಯನ್ನು 20ಕ್ಕೇರಿಸಿಕೊಂಡ್ರು. ಜೊತೆಗೆ ಡಾಮಿನಿಕ್ ಮತ್ತು ಜಾಯ್ ರೂಟ್ ಅವರು ಮೂರನೇ ವಿಕೆಟ್ ಗೆ 200 ರನ್ ಕೂಡ ಕಲೆ ಹಾಕಿದ್ದರು.
ಇನ್ನೇನೂ ದಿನದ ಆಟ ಮುಗಿಯಲು ಕೇವಲ ಮೂರು ಎಸೆತಗಳು ಬಾಕಿ ಇದ್ದಾಗ ಡಾಮಿನಿಕ್ ಅವರು ತಾಳ್ಮೆ ಕಳೆದುಕೊಂಡ್ರು. ಜಸ್ಪ್ರಿತ್ ಬೂಮ್ರಾ ಅವರ ಎಸೆತವನ್ನು ಅರಿಯುವಲ್ಲಿ ವಿಫಲರಾದ ಡಾಮಿನಿಕ್ 87 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಅಂತಿಮವಾಗಿ ಇಂಗ್ಲೆಂಡ್ ಮೊದಲ ದಿನದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 263 ರನ್ ಗಳಿಸಿದೆ. ಜಾಯ್ ರೂಟ್ ಅವರು 197 ಎಸೆತಗಳಲ್ಲಿ 14 ಬೌಂಡರಿ ಮತ್ತು ಒಂದು ಸಿಕ್ಸರ್ ಗಳ ಸಹಾಯದಿಂದ ಅಜೇಯ 128 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ ಜಸ್ಪ್ರಿತ್ ಬೂಮ್ರಾ ಅವರು ಎರಡು ವಿಕೆಟ್ ಉರುಳಿಸಿದ್ದಾರೆ.