World Cup 2022 : ಭಾರತ ತಂಡಕ್ಕೆ ಸೋಲು
2022ರ ಮಹಿಳಾ ವಿಶ್ವಕಪ್ ಭಾಗವಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡ, ಇಂಗ್ಲೆಂಡ್ ತಂಡದ ವಿರುದ್ದ ನಾಲ್ಕು ವಿಕೆಟ್ ಗಳಿಂದ ಹೀನಾಯವಾಗಿ ಸೋಲುಂಡಿದೆ.
ಇದರೊಂದಿಗೆ ಹ್ಯಾಟ್ರಿಕ್ ಸೋಲುಗಳೊಂದಿಗೆ ಕಂಗೆಟ್ಟಿದ್ದ ಇಂಗ್ಲೆಂಡ್ ಮಹಿಳಾ ತಂಡ, ಟೂರ್ನಿಯಲ್ಲಿ ಉಳಿಯುವ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಮಿಥಾಲಿ ರಾಜ್ ಪಡೆ, 36.2 ಓವರ್ ಗಳಲ್ಲಿ 134 ರನ್ ಗಳಿಸಿ ಆಲೌಟ್ ಆಯ್ತು.
ಭಾರತದ ಪರ ಸ್ಮೃತಿ ಮಂಧನಾ (35), ಹರ್ಮನ್ ಪ್ರಿತ್ ಕೌರ್ (14), ರಿಚಾ ಘೋಷ್ (33) ಮತ್ತು ಜುಲಾನ್ ಗೋಸ್ವಾಮಿ (20) ಮಾತ್ರ ಎರಡಂಕಿ ಮುಟ್ಟಿದರು.
ಯಸ್ತಿಕಾ ಭಾಟಿಯಾ (8), ಮಿಥಾಲಿ ರಾಜ್ (1), ದೀಪ್ತಿ ಶರ್ಮಾ (0), ಸ್ನೇಹ್ ರಾಣಾ (0), ಪೂಜಾ (6), ಮೇಘನಾ (3) ರನ್ ಗಳಿಸಿದರು.
ಈ ಸುಲಭ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಆರಂಭದಲ್ಲಿ ಡ್ಯಾನಿ ವ್ಯಾಟ್ (1), ಟಾಮಿ ಬಿ ಮೌಂಟ್ (1) ವಿಕೆಟ್ ಬೇಗನೆ ಕಳೆದುಕೊಂಡಿತು.
ಆದರೆ ನಾಯಕಿ ಹೀದರ್ ನೈಟ್ ಅಜೇಯ 53 ರನ್ ಮತ್ತು ನ್ಯಾಟ್ ಸೀವಿರ್ (45) ಉತ್ತಮ ಆಟ ಆಡಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಇಂಗ್ಲೆಂಡ್ 31.2 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಭಾರತದ ಪರ ಮೇಘನಾ ಸಿಂಗ್ 3 ವಿಕೆಟ್ ಪಡೆದರು. ಟೂರ್ನಿಯಲ್ಲಿ ಭಾರತ 4 ಪಂದ್ಯಗಳಿಂಧ 2 ಗೆಲುವು ಮತ್ತು 2 ಸೋಲು ಕಂಡಿದ್ದರೂ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
India vs England Highlights Women’s World Cup 2022