U-19 WorldCup | ಫೈನಲ್ ನಲ್ಲಿ ಗೆಲುವು ಯಾರಿಗೆ..? India vs England U19 World Cup Final
ಆ್ಯಂಟಿಗುವಾ : ಅಂಡರ್ 19 ವಿಶ್ವಕಪ್ ನ ಫೈನಲ್ ನಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ.
ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಭಾರತದ ಯುವ ತಂಡ ಹಾಟ್ ಫೇವರಿಟ್ ಎನಿಸಿಕೊಂಡಿದೆ.
ಫೈನಲ್ ಗೆ ಮುನ್ನ ಎರಡೂ ತಂಡಗಳು ಅಜೇಯವಾಗಿ ಉಳಿದಿದ್ದರೂ, ಎದುರಾಳಿ ಇಂಗ್ಲೆಂಡ್ ಗೆ ಹೋಲಿಸಿದರೆ ಭಾರತ ಬಲಿಷ್ಠವಾಗಿದೆ.
ನಾಯಕ ಯಶ್ ಧುಲ್ ಮತ್ತು ಉಪನಾಯಕ ಶೇಖ್ ರಶೀದ್ ಸೇರಿದಂತೆ ಹಲವಾರು ಪ್ರಮುಖ ಆಟಗಾರರು ಟೂರ್ನಿ ಆರಂಭದಲ್ಲಿ ಕರೋನಾ ಸೋಂಕಿಗೆ ತುತ್ತಾಗಿದ್ದರು.
ಆದರೂ ಅಮೋಘ ಪ್ರದರ್ಶನ ನೀಡಿದ ಯಂಗ್ ಇಂಡಿಯಾ, ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳಲ್ಲಿ ಘನ ಜಯಗಳಿಸಿ, ಫೈನಲ್ ಪ್ರವೇಶಿಸಿದೆ.
ಇಂದಿನ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿರುವ ಟೀಂ ಇಂಡಿಯಾ ಐದನೇ ಪ್ರಶಸ್ತಿಗೆ ಮುತ್ತಿಡುವ ತವಕದಲ್ಲಿದೆ.
ಮತ್ತೊಂದೆಡೆ ಎದುರಾಳಿ ಇಂಗ್ಲೆಂಡ್ ಕೂಡ ವಿಶ್ವಕಪ್ ವಶಪಡಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿದೆ.
ಇಂಗ್ಲೆಂಡ್ ತಂಡ 1998ರಲ್ಲಿ ಕೊನೆಯ ಬಾರಿ ವಿಶ್ವಕಪ್ ಗೆದ್ದಿತ್ತು. ಯಂಗ್ ಇಂಗ್ಲೆಂಡ್ ತಂಡ ಕೂಡ ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕೆಂಬ ಹಠದಲ್ಲಿದೆ.
ಏತನ್ಮಧ್ಯೆ, ಇದುವರೆಗಿನ 14 ಅಂಡರ್-19 ವಿಶ್ವಕಪ್‌ಗಳಲ್ಲಿ (2022 ರ ವಿಶ್ವಕಪ್ ಸೇರಿದಂತೆ) ಯಂಗ್ ಇಂಡಿಯಾ ದಾಖಲೆಯ 4 ಪ್ರಶಸ್ತಿಗಳನ್ನು ಗೆದ್ದು 8 ಬಾರಿ ಫೈನಲ್ ತಲುಪಿದೆ.
ಈ ಹಿಂದೆ ಮೊಹಮ್ಮದ್ ಕೈಫ್ (2002), ವಿರಾಟ್ ಕೊಹ್ಲಿ (2008), ಉನ್ಮುಕ್ತ್ ಚಂದ್ (2012) ಮತ್ತು ಪೃಥ್ವಿ ಶಾ (2018) ನಾಯಕತ್ವದಲ್ಲಿ ಟೀಂ ಇಂಡಿಯಾ ಅಂಡರ್-19 ವಿಶ್ವಕಪ್ ಗೆದ್ದಿತ್ತು.









