Ind Vs Pak : ಪಾಕ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೆಯಿಂಗ್ ಇಲೆವೆನ್
ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಅಂದರೇ ಅಭಿಮಾನಿಗಳ ದೃಷ್ಠಿಯಲ್ಲಿ ಅದು ದೊಡ್ಡ ಸಮರ.
ಯುದ್ಧಕ್ಕೆ ಯಾವುದೇ ರೀತಿ ಕಡಿಮೆ ಇಲ್ಲದಂತಹ ವಾತಾವರಣ ನಿರ್ಮಾಣವಾಗಿರುತ್ತದೆ.
ಯಾರ ವಿರುದ್ಧ ಸೋಲುಂಡರೂ ಇಲ್ಲಿ ಮಾತ್ರ ಸೋಲಬಾರದು ಎಂಬೋದು ಆಟಗಾರರ ಧ್ಯೇಯವಾಗಿರುತ್ತದೆ.
ಮಾತಿನ ಸಮರ.. ಟಿವಿಗಳಲ್ಲಿ ಬಿಸಿ ಬಿಸಿ ಚರ್ಚೆ..
ಇದು ಈ ಹಿಂದೆ ಇದ್ದ ಪರಿಸ್ಥಿತಿ..
ಆದರೇ ಈಗ ಆಟಗಾರರ ನಡುವೆ ಸ್ನೇಹ ಸಂಬಂಧ ಹೆಚ್ಚಾಗಿದೆ.
ಒಬ್ಬರನ್ನೊಬ್ಬರು ಗೌರವಿಸಿಕೊಳ್ಳುತ್ತಾರೆ. ಉಭಯ ಕುಶಲೋಪರಿ ವಿಚಾರಿಸುತ್ತಾರೆ.
ಆದ್ರೂ ಕ್ರಿಕೆಟ್ ಪಂದ್ಯ ಅಂತಾ ಬಂದರೇ ಉಭಯ ತಂಡಗಳ ಆಟಗಾರರು ಗೆಲುವಿಗಾಗಿ ಜಿದ್ದಾಜಿದ್ದನ ಹೋರಾಟ ನಡೆಸುತ್ತಾರೆ. ಗೆಲುವೊಂದೇ ಉಭಯ ತಂಡಗಳ ಗುರಿಯಾಗಿರುತ್ತದೆ.

ದ್ವಿಪಕ್ಷೀಯ ಸರಣಿಗಳು ಇಲ್ಲದಿರುವುದರಿಂದ ಇಂಡೋ – ಪಾಕ್ ಕದನವನ್ನ ನಾವು ಐಸಿಸಿ ಟೂರ್ನಿಗಳಲ್ಲಿ ಮಾತ್ರ ನೋಡಬಹುದಾಗಿದೆ.
ಈ ಹಿಂದೆ 2021 ರ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ ಸೋಲು ಕಂಡಿತ್ತು.
ಹೀಗಾಗಿ ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ.
ಅದಕ್ಕೆ ಸುವರ್ಣ ಅವಕಾಶವೊಂದು ಕೂಡಿ ಬಂದಿದ್ದು, ಏಷ್ಯಾಕಪ್ ಭಾಗವಾಗಿ ಇಂದು ಭಾರತ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ದುಬೈ ಅಂಗಳ ಇಂಡೋ ಪಾಕ್ ಕದನಕ್ಕೆ ಸಜ್ಜಾಗಿದ್ದು, ಕ್ರಿಕೆಟ್ ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದಾರೆ.
ಭಾರತ ಸಂಭಾವ್ಯ ತಂಡ :
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ / ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷ್ ದೀಪ್ ಸಿಂಗ್, ಯುಜುವೇಂದ್ರ ಚಹಾಲ್, ಆವೇಶ್ ಖಾನ್.








