India vs South Africa | ಸಂಜು ಹೋರಾಟ ವ್ಯರ್ಥ.. ಭಾರತಕ್ಕೆ ವಿರೋಚಿತ ಸೋಲು
ಲಕ್ನೋ : ಸಂಜು ಸ್ಯಾಮ್ ಸನ್ ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಲಕ್ನೋ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 9 ರನ್ ಗಳಿಂದ ಸೋಲು ಒಪ್ಪಿಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1 – 0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಾಲ್ಕು ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು.
ಸೌತ್ ಆಫ್ರಿಕಾ ಪರ ಆರಂಭಿಕ ಮಲನ್ 22 ರನ್, ಡಿ ಕಾಕ್ 48 ರನ್, ಕ್ಲಾಸೆನ್ 74 ರನ್, ಮಿಲ್ಲರ್ 75 ರನ್ ಗಳಿಸಿದರು.
ಬೌಲಿಂಗ್ ನಲ್ಲಿ ಭಾರತದ ಪರ ಶರ್ದೂಲ್ ಠಾಕೂರ್ ಎರಡು ವಿಕೆಟ್, ರವಿ ಬಿಷ್ನೋಯಿ, ಕುಲ್ ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಈ ಕಠಿಣ ಗುರಿಯನ್ನ ಬೆನ್ನಟ್ಟಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ.
ಆರಂಭಿಕರಾದ ಶಿಖರ್ ಧವನ್, ಗಿಲ್ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಗಾಯಕ್ವಾಡ್ 19 ರನ್, ಇಶನ್ ಕಿಶನ್ 20 ರನ್ ಗಳಿಸಿದರು. ಈ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಶ್ರೇಯಸ್ ಅಯ್ಯರ್ – ಸಂಜು ಸ್ಯಾಮ್ ಸನ್ ಆಸರೆಯಾದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ 50 ರನ್ ಗಳಿಸಿ ಔಟ್ ಆದರು.
ಇದಾದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಮುಂದಾದ ಸಂಜು, ಶರ್ದೂಲ್ ಠಾಕೂರ್ ಜೊತೆ ಸೇರಿ ಉತ್ತಮ ಆಟದ ಪ್ರದರ್ಶನ ನೀಡಿದರು.
ಈ ಜೋಡಿ ಆರನೇ ವಿಕೆಟ್ ಗೆ 66 ಎಸೆತಗಳಿಗೆ 93 ರನ್ ಜೊತೆಯಾಟವಾಗಿದರು. ಆದ್ರೆ ಕೊನೆಯಲ್ಲಿ 33 ರನ್ ಗಳಿಸಿದ್ದ ಶರ್ದೂಲ್ ಔಟ್ ಆದರು.
ಇತ್ತ ತಮ್ಮ ನೈಜ ಬ್ಯಾಟಿಂಗ್ ಮುಂದುವರೆಸಿದ ಸಂಜು ಸ್ಯಾಮ್ ಸನ್, ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದರು.
ಕೊನೆಯ ಓವರ್ ನಲ್ಲಿ ಭಾರತಕ್ಕೆ ಪಂದ್ಯ ಗೆಲ್ಲಲು 31 ರನ್ ಬೇಕಿತ್ತು.
ಈ ಓವರ್ ನಲ್ಲಿ ಸಂಜು 20 ರನ್ ಗಳನ್ನು ಚಚ್ಚಿದರು.
ಆ ಮೂಲಕ ಭಾರತ 9 ರನ್ ಗಳಿಂದ ಸೋಲು ಕಂಡಿತು.
ಸಂಜು ಸ್ಯಾಮ್ ಸನ್ 86 ರನ್ ಗಳನ್ನ ಗಳಿಸಿ ಅಜೇಯರಾಗಿ ಉಳಿದರು.