India Vs South Africa ಮೊದಲ T20 – ಭಾರತಕ್ಕೆ ಸರಣಿ ಗೆಲ್ಲುವ ಸವಾಲು..
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ20 ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಇಂದು ತಿರುವನಂತಪುರದಲ್ಲಿ ನಡೆಯಲಿದೆ. ಟೀಮ್ ಇಂಡಿಯಾ ತನ್ನ ನೆಲದಲ್ಲಿಇದುವರೆಗೂ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನ ಗೆದ್ದಿಲ್ಲ. ಈ ಸರಣಿ ಭಾರತಕ್ಕೆ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ
2015 ರಲ್ಲಿ ಮೊದಲ ಬಾರಿಗೆ ಉಭಯ ತಂಡಗಳ ನಡುವೆ T20 ಸರಣಿಯನ್ನ ಆಡಿಸಲಾಯಿತು. ಇದರಲ್ಲಿ ಟೀಮ್ ಇಂಡಿಯಾ 0-2 ಸೋಲನುಭವಿಸಿತ್ತು. ಇದರ ನಂತರ 2019 ರಲ್ಲಿ ಆಡಿದ್ದ ಟಿ20 ಸರಣಿ 1-1 ರಲ್ಲಿ ಸಮವಾವಾಗಿತ್ತು. 2022 ರಲ್ಲಿ ನಡೆದ ಸರಣಿಯು 2-2 ರಲ್ಲಿ ಸಮಬಲವಾಗಿತ್ತು. ಕಳೆದ 7 ವರ್ಷಗಳಲ್ಲಿ ಎರಡು ತಂಡಗಳ ನಡುವೆ ಭಾರತದಲ್ಲಿ 3 ಟಿ20 ಸರಣಿಗಳು ನಡೆದಿದ್ದು, ಒಮ್ಮೆಯೂ ಟೀಂ ಇಂಡಿಯಾ ಗೆದ್ದಿಲ್ಲ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ 20 ಟಿ20 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 11ರಲ್ಲಿ ಗೆದ್ದಿದೆ. ದಕ್ಷಿಣ ಆಫ್ರಿಕಾ ಎಂಟು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ನಾಲ್ಕು ತಿಂಗಳ ಅವಧಿಯಲ್ಲಿ ಉಭಯ ತಂಡಗಳ ನಡುವಿನ ಎರಡನೇ ಟಿ20 ಸರಣಿ ಇದಾಗಿದೆ. ಈ ವರ್ಷದ ಜೂನ್ನಲ್ಲಿ ಆಫ್ರಿಕನ್ ತಂಡ ಐದು ಪಂದ್ಯಗಳನ್ನು ಆಡಲು ಭಾರತಕ್ಕೆ ಬಂದಿತ್ತು. ಸರಣಿಯು 2-2ರಲ್ಲಿ ಸಮಬಲವಾಯಿತು. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿರಲಿಲ್ಲ.
ಪಿಚ್ ಹೇಗಿರಲಿದೆ?
ತಿರುವನಂತಪುರಂನಲ್ಲಿರುವ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿನ ಪಿಚ್ ಬೌಲರ್ಗಳಿಗೆ ಸಹಾಯ ಮಾಡುತ್ತದೆ. ಇದು ವೇಗಿಗಳಿಗೆ ಮಾತ್ರವಲ್ಲದೆ ಸ್ಪಿನ್ನರ್ಗಳಿಗೂ ನೆರವಾಗಲಿದೆ. ಬ್ಯಾಟ್ಸ್ಮನ್ಗಳು ದೊಡ್ಡ ಇನ್ನಿಂಗ್ಸ್ಗಳನ್ನು ಆಡಬೇಕಾದರೆ ಆರಂಭದಲ್ಲಿ ಸ್ವಲ್ಪ ತಾಳ್ಮೆಯನ್ನು ಪ್ರದರ್ಶಿಸಬೇಕು ಮತ್ತು ಸ್ಥಿರವಾಗಿ ಬ್ಯಾಟಿಂಗ್ ಮಾಡಬೇಕು. ಇದರ ನಂತರ, ಇಲ್ಲಿ ದೊಡ್ಡ ಹೊಡೆತಗಳನ್ನ ತೆಗೆದುಕೊಳ್ಳಬಹುದು.
ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ಭಾರತದ ಪ್ರದರ್ಶನ
ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ಒಟ್ಟು ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಒಂದರಲ್ಲಿ ಟೀಂ ಇಂಡಿಯಾ ಗೆದ್ದಿದೆ. 2017ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಪಂದ್ಯ ನಡೆದಿತ್ತು. 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ಈ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ.
ಅರ್ಷದೀಪ್ ಸಿಂಗ್ ವಾಪಸ್
ಅರ್ಷದೀಪ್ ಸಿಂಗ್ ಇಂದಿನ ಪಂದ್ಯದಲ್ಲಿ ಅವಕಾಶ ಪಡೆಯಬಹುದು. ಈ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಹೊರಗುಳಿದಿರುವ ಕಾರಣ. ಅರ್ಷದೀಪ್ ಗೆ ಚಾನ್ಸ್ ಸಿಗಲಿದೆ. ಪಂಜಾಬ್ ಮೂಲದ ಈ ವೇಗದ ಬೌಲರ್ ಏಷ್ಯಾಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ವಿಶ್ವಕಪ್ ತಂಡದ ಭಾಗವೂ ಆಗಿದ್ದಾರೆ.
ಎರಡೂ ತಂಡಗಳ ಸಾಂಭಾವ್ಯ ಪ್ಲೇಯಿಂಗ್ XI
ಸಾಂಭಾವ್ಯ ಭಾರತ– ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್.
ಸಾಂಭಾವ್ಯ ದಕ್ಷಿಣ ಆಫ್ರಿಕಾ – ರೆಜಾ ಹೆಂಡ್ರಿಕ್ಸ್, ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ಸಿ), ಏಡನ್ ಮಾರ್ಕ್ರಾಮ್, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ವೇಯ್ನ್ ಪೆರ್ನೆಲ್, ತಬರಿಜ್ ಶಮ್ಸಿ, ಕಗಿಸೊ ರಬಾಡ, ಎನ್ರಿಕ್ ನೋರ್ತ್ಯ, ಕೇಶವ್ ಮಹಾರಾಜ್.
India Vs South Africa Rohit Sharma Virat Kohli Jasprit Bumrah | IND VS SA Playing 11








