ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ (Team India) ಗೆಲುವಿನ ಸನೀಹದಲ್ಲಿದೆ. ಪಂದ್ಯ ಐದನೇ ದಿನ ಟೀಮ್ ಇಂಡಿಯಾಗೆ ಬೇಕಾಗಿರೋದು ಕೇವಲ 58 ರನ್ ಮಾತ್ರ. ನಾಲ್ಕನೇ ದಿನದ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ಆರಂಭಿಕ ಕೆ.ಎಲ್. ರಾಹುಲ್ ಅಜೇಯ 25 ಮತ್ತು ಸಾಯಿ ಸುದರ್ಶನ್ ಅಜೇಯ 30 ರನ್‌ಗಳೊಂದಿಗೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯವನ್ನು ಕೈ ವಶ ಮಾಡಿಕೊಳ್ಳಲು 121 ರನ್‌ಗಳ ಸವಾಲನ್ನು ಬೆನ್ನಟ್ಟಿದ್ದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 175 ರನ್ ಸಿಡಿಸಿದ್ದ ಟೀಮ್ ಇಂಡಿಯಾದ ಭರವಸೆಯ ಆರಂಭಿಕ ಯಶಸ್ವಿ ಜೈಸ್ವಾಲ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 8 ರನ್‌ಗಷ್ಟೇ ತೃಪ್ತಿಪಟ್ಟುಕೊಂಡ್ರು.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಯುಗಾಂತ್ಯದ ಮುನ್ಸೂಚನೆ? 2027ರ ವಿಶ್ವಕಪ್ ರೇಸ್‌ನಿಂದ ಕೊಹ್ಲಿ, ರೋಹಿತ್ ಔಟ್?
ಇದಕ್ಕಿಂತ ಮೊದಲು ಇನಿಂಗ್ಸ್ ಸೋಲಿನ ಭೀತಿಯಲ್ಲೇ ಎರಡನೇ ಇನಿಂಗ್ಸ್ ಆರಂಭಿಸಿದ್ದ ಕೆರೆಬಿಯನ್ನರ್ ಭಾರತದ ದಾಳಿಗೆ ದಿಟ್ಟ ಉತ್ತರವನ್ನೇ ನೀಡಿದ್ರು. ಆರಂಭಿಕ ಜಾನ್ ಕ್ಯಾಂಬೆಲ್ 115 ಮತ್ತು ಶಾಯ್ ಹೋಪ್ ಅವರ ಆಕರ್ಷಕ 103 ರನ್‌ಗಳ ಸಹಾಯದಿಂದ ವಿಂಡೀಸ್ ಹೀನಾಯ ಸೋಲಿನಿಂದ ಬಚಾವ್ ಆಯ್ತು. ಈ ನಡುವೆ ಜಸ್ಟಿನ್ ಗ್ರೇವ್ಸ್ ಅರ್ಧಶತಕ ಸಿಡಿಸಿದ್ರು, ಈ ಮೂಲಕ ವೆಸ್ಟ್ ಇಂಡೀಸ್ ತನ್ನ 2ನೇ ಇನಿಂಗ್ಸ್‌ನಲ್ಲಿ 390 ರನ್‌ಗಳಿಗೆ ಸರ್ವಪತನಗೊಂಡಿತ್ತು, ಭಾರತದ ಪರ ಕುಲದೀಪ್ ಯಾದವ್ ಮತ್ತು ಜಸ್ಪ್ರಿತ್ ಬೂಮ್ರಾ ತಲಾ ಮೂರು ವಿಕೆಟ್ ಉರುಳಿಸಿದ್ರೆ, ಮಹಮ್ಮದ್ ಸಿರಾಜ್ 2 ವಿಕೆಟ್ ಪಡೆದ್ರು. ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಕಬಳಿಸಿದ್ರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







