`ಟೋಲ್ ಬೂತ್ ರದ್ದು, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ’ toll booths
ನವದೆಹಲಿ : ಒಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್ ಬೂತ್ಗಳನ್ನು ತೆಗೆದುಹಾಕಲಾಗುವುದು. ಜಿಪಿಎಸ್ ಮೂಲಕ ಟೋಲ್ ಸಂಗ್ರಹ ನಡೆಯಲಿದೆ.
ಜಿಪಿಎಸ್ ಇಮೇಜಿಂಗ್ (ವಾಹನಗಳ ಮೇಲೆ) ಆಧರಿಸಿ ಹಣ ಸಂಗ್ರಹಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಪ್ರಶ್ನೆ ಒಂದಕ್ಕೆ ಉತ್ತರಿಸಿದ ನಿತಿನ್ ಗಡ್ಕರಿ, ಪ್ರಸ್ತುತ, ಶೇ 93 ರಷ್ಟು ವಾಹನಗಳು ಫಾಸ್ಟ್ಟ್ಯಾಗ್ ಬಳಸಿ ಟೋಲ್ ಪಾವತಿಸುತ್ತವೆ.
ಉಳಿದ ಶೇ 7ರಷ್ಟು ಜನರು ಡಬಲ್ ಟೋಲ್ ಪಾವತಿಸಿದರೂ ಟ್ಯಾಗ್ ತೆಗೆದುಕೊಂಡಿಲ್ಲ. ಒಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್ ಬೂತ್ಗಳನ್ನು ತೆಗೆದುಹಾಕಲಾಗುವುದು.
ಜಿಪಿಎಸ್ ಮೂಲಕ ಟೋಲ್ ಸಂಗ್ರಹ ನಡೆಯಲಿದೆ. ಜಿಪಿಎಸ್ ಇಮೇಜಿಂಗ್ (ವಾಹನಗಳ ಮೇಲೆ) ಆಧರಿಸಿ ಹಣ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.