ಭಾರತದ ಆರ್ಥಿಕಥೆ ಸುಧಾರಿಸಿಕೊಳ್ಳುತ್ತಿದೆ: ಭಾರತದಲ್ಲಿ ಹೂಡಿಕೆ ಯೋಜನೆಗಳು ಪ್ರಗತಿಯಲ್ಲಿವೆ: ಸೌದಿ..!
ಶೀಘ್ರವೇ ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಸೌದಿ ಅರೇಬಿಯಾ ಹೇಳಿದೆ. ಹೌದು ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರ ಸೌದಿ ಅರೇಬಿಯಾ, ಭಾರತದಲ್ಲಿನ ತನ್ನ ಹೂಡಿಕೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದು, ಕೊರೊನಾ ವೈರಸ್ ಬಿಕ್ಕಟ್ಟಿನ ನಕಾರಾತ್ಮಕ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಭಾರತೀಯ ಆರ್ಥಿಕತೆಗೆ ಶಕ್ತಿ ಇದೆ ಎಂದು ಹೇಳಿದೆ. ಅಲ್ಲದೇ ಭಾರತದಲ್ಲಿ ಹೂಡಿಕೆ ಮಾಡುವ ನಮ್ಮ ಯೋಜನೆಗಳು ಜಾರಿಯಲ್ಲಿವೆ ಮತ್ತು ಎರಡೂ ದೇಶಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳಿಗೆ ಆದ್ಯತೆ ನೀಡಲು ನಾವು ಚರ್ಚಿಸುತ್ತಿದ್ದೇವೆ ಎಂದು ಈ ಮೂಲಕ ಭಾರತದ ಆರ್ಥಿಕತೆ ಚೇತರಿಕೆಗೆ ನೆರವಾಗುವುದಾಗಿ ತಿಳಿಸಿದೆ.
ಮಾಸ್ತಿಫ್ ಬಲಿಷ್ಠ ಶ್ವಾನ ತಳಿಗಳು : ಈ ಶ್ವಾನಗಳ ಬಗ್ಗೆ ನಿಮಗೆಷ್ಟು ಗೊತ್ತು?
ಈ ಕುರಿತಾಗಿ ಸುದ್ದಿಗಾರರ ಜೊತೆಗೆ ಮಾತನಾಡಿರೋ ಸೌದಿ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಸೌದಿ ಅರೇಬಿಯಾವು ಭಾರತವನ್ನು ತನ್ನ ಕಾರ್ಯತಂತ್ರದ ಪಾಲುದಾರ ಮತ್ತು ಆಪ್ತ ಸ್ನೇಹಿತ ಎಂದು ಗೌರವಿಸುತ್ತದೆ. ತರಬೇತಿ, ಜ್ಞಾನ ಹಂಚಿಕೆ ಮತ್ತು ಭಯೋತ್ಪಾದನೆ ಮಟ್ಟ ಹಾಕುವ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವು, ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿಯೂ ಸಹಭಾಗಿತ್ವದ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದ್ದಾರೆ. ಅಂದ್ಹಾಗೆ ಭಾರತದಲ್ಲಿ ಪೆಟ್ರೋಕೆಮಿಕಲ್ಸ್, ಗಣಿಗಾರಿಕೆ ಮತ್ತು ಉತ್ಪಾದನೆ, ಕೃಷಿ ಸಂಸ್ಕರಣೆ, ಮೂಲಸೌಕರ್ಯ ಸೇರಿದಂತೆ ಇತರ ಹಲವು ಕ್ಷೇತ್ರಗಳಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಕಳೆದ ವರ್ಷ ಫೆಬ್ರುವರಿಯಲ್ಲಿ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ್ದರು. ಇದೀಗ ಭಾರತೀಯ ಆರ್ಥಿಕತೆಗೆ ನೆರವಾಗುವುದು ಹಾಗೂ ಭಾರತದಲ್ಲಿನ ಹೂಡಿಕೆ ಯೋಜನೆಗಳು ಪ್ರಗತಿಯಲ್ಲಿರೋದಾಗಿ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








